ಡೀಸೆಲ್ ದರ ಏರಿಕೆ: ಖಾಸಗಿ ಬಂಕ್‌ಗಳತ್ತ ಕೆಎಸ್ಸಾರ್ಟಿಸಿ ಬಸ್‌ಗಳು
ಮುಂಡರಗಿ: ಕೇಂದ್ರ ಸರ್ಕಾರವು ಡೀಸೆಲ್ ದರ ಹೆಚ್ಚಿಸಿರುವುದರಿಂದ ದರ ಏರಿಕೆ ಹೊರೆ ಕಡಿಮೆ ಮಾಡಿಕೊಳ್ಳಲು ಪ್ರಯಾಣ ದರ ಹೆಚ್ಚಳದ ಬದಲು ಪರ್ಯಾಯ ಮಾರ್ಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಂಡರಗಿ ಘಟಕದ ಬಸ್‌ಗಳು ಸೋಮವಾರ ಸಂಜೆಯಿಂದ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ತುಂಬಿಸಿಕೊಳ್ಳುವುದು ಕಂಡುಬಂದಿತು. ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಗೆ ನೇರವಾಗಿ ಕಂಪನಿಗಳಿಂದ ಪೂರೈಕೆ ಆಗುವ ಡೀಸೆಲ್ ಪ್ರತಿ ಲೀಟರ್‌ಗೆ ರು. 12 ದುಬಾರಿ ದರದಲ್ಲಿ ದೊರೆಯುತ್ತದೆ. ಆದರೆ, ಖಾಸಗಿ ಬಂಕ್‌ಗಳಲ್ಲಿ ಕೇವಲ 50 ಪೈಸೆ ಮಾತ್ರ ಹೆಚ್ಚಾಗಿದೆ. ಆದ್ದರಿಂದ ಖಾಸಗಿ ಬಂಕ್‌ಗಳತ್ತ ಸರ್ಕಾರಿ ಬಸ್‌ಗಳು ಡೀಸೆಲ್‌ಗಾಗಿ ತೆರಳುತ್ತಿವೆ.