ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈಶ್ವರಪ್ಪ ಬಡಿಗೇರ ನಿಧನ (ಸುದ್ದಿ ಸಂಕ್ಷೇಪ)

Mainashree
Updated On : 23 Jan 2013, 11:12 am

ಮುಂಡರಗಿ:  ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಈಶ್ವರಪ್ಪ ಸಂಗಪ್ಪ ಬಡಿಗೇರ (68) ಇವರು ಈಚೆಗೆ ನಿಧನರಾದರು. ಮೃತರು ಪತ್ನಿ, ಬೆಂಗಳೂರು ಬಿಬಿಎಂಪಿ ಅಭಿಯಂತರ ನಾಗರಾಜ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಳಗ ಹೊಂದಿದ್ದರು. ಇವರ ನಿಧನಕ್ಕೆ ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ರಜನೀಕಾಂತ ದೇಸಾಯಿ, ಮಲ್ಲಪ್ಪ ಸಂಗಟಿ, ಚಿನ್ನಪ್ಪ ವಡ್ಡಟ್ಟಿ, ರವಿ ಕುಂಬಾರ, ಬಸವರಾಜ ಕುಂಬಾರ, ಡಿ.ಡಿ. ಮೋರನಾಳ, ಎಸ್.ವಿ. ಪಾಟೀಲ, ವಿ.ಟಿ. ಮೇಟಿ, ಸೀತಾರಾಮರಾಜು, ಸುರೇಶ ಜೈನ್, ಸುರೇಶ ಕ್ಯಾದಿಗಿಹಳ್ಳಿ ಸಂತಾಪ ಸೂಚಿಸಿದ್ದಾರೆ.

ಬೈಕ್ ಪಲ್ಟಿ: ಸವಾರ ಸಾವು
ಗದಗ: ವೇಗವಾಗಿ ಚಲಾಯಿಸುತ್ತಿದ್ದ ಬೈಕ್‌ವೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಗ್ಗಿನಲ್ಲಿ ಬಿದ್ದು ಸವಾರನು ಮೃತಪಟ್ಟಿರುವ ಘಟನೆ ತಾಲೂಕಿನ ಖಾನಾಪುರ ಮತ್ತು ಬಸಾಪುರ ಮಧ್ಯೆ ಸಂಭವಿಸಿದೆ. ಮೃತನನ್ನು ಮುಳಗುಂದ ಪಟ್ಟಣದ ನಿವಾಸಿ ದಾವಲಸಾಬ ಹಸನಸಾಬ ನದಿಮುಲ್ಲಾ (29) ಎಂದು ಗುರುತಿಸಲಾಗಿದ್ದು, ಶಿರಹಟ್ಟಿಯಿಂದ ಬಸಾಪುರ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26ರಿಂದ ಕಬಡ್ಡಿ ಪಂದ್ಯಾವಳಿ
ಲಕ್ಕುಂಡಿ: ರಾಮಲಿಂಗೇಶ್ವರ ಯುವಕ ಮಂಡಳ, ಗದಗ ಜಿಲ್ಲಾ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ. 26 ಹಾಗೂ 27ರಂದು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಪ್ರಥಮ ಬಹುಮಾನ ರು. 21,001 ದ್ವಿತೀಯ ಬಹುಮಾನ ರು. 15,001 ತೃತೀಯ ಬಹುಮಾನ ರು. 10,001 ಚತುರ್ಥ ಬಹುಮಾನ ರು. 5,001 ನೀಡಲಾಗುವುದು, ಪ್ರತಿ ತಂಡಕ್ಕೆ ಪ್ರವೇಶ ಮೊತ್ತ ರು. 301 ಭಾಗವಹಿಸುವ ತಂಡಗಳು ಗ್ರಾಪಂ ಸದಸ್ಯ ಪ್ರಕಾಶ ಅರಹುಣಶಿ ಮೊ. 9731537940, ಕಲ್ಲಪ್ಪ ಅಂಬಕ್ಕಿ-9900218280, ಶಿವನಗೌಡ ಪಾಟೀಲ-9740018873 ಇಲ್ಲಿಗೆ ಸಂಪರ್ಕಿಸುವಂತೆ ಯುವಕ ಮಂಡಳದ ಪ್ರಕಟಣೆ ತಿಳಿಸಿದೆ.

ಶಾಲೆಗೆ ಡಿಡಿಪಿಐ ಭೇಟಿ
ಲಕ್ಕುಂಡಿ: ಇಲ್ಲಿನ ಬಿ.ಎಚ್. ಪಾಟೀಲ ಪ್ರೌಢ ಶಾಲೆಗೆ ಈಚೆಗೆ ಗದಗ ಡಿಡಿಪಿಐ ರಾಜೀವ ನಾಯಕ ಭೇಟಿ ನೀಡಿ ಪರೀಶಿಲನೆ ನಡೆಸಿದರು. ಶಾಲೆಯ ಮಕ್ಕಳ ಹಾಜರಾತಿ, ಶೌಚಾಲಯ, ಬಿಸಿಯೂಟ ಕೊಠಡಿಗಳನ್ನು ವೀಕ್ಷಿಸಿದರು. ನಂತರ ಆಟದ ಮೈದಾನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ಪರೀಕ್ಷೆ ಎದುರಿಸುವ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿ ಉತ್ತಮ ಫಲಿತಾಂಶ ಬರಲು ಸೂಕ್ತ ಸಲಹೆ ನೀಡಿದರು. ಖಾಜಿ ಮಕಾಂದಾರ, ದಾಸರ ಮುಂತಾದವರು ಹಾಜರಿದ್ದರು.

ಇಂದು ಸುಭಾಸಚಂದ್ರ ಬೋಸ್ ಜಯಂತಿ
ಬೆಟಗೇರಿ: ಸ್ಥಳೀಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪಪೂ ಮಹಾವಿದ್ಯಾಲಯದ ವತಿಯಿಂದ ಬೆಟಗೇರಿಯ ಗಾಂಧಿ ವೃತ್ತದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಸಚಂದ್ರ ಬೋಸ್ ಜಯಂತಿ ಅಂಗವಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಜ. 23ರ ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ. ಸುಭಾಸಚಂದ್ರ ಭೋಸ ಅವರ ಕುರಿತು ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಧೀರ ಘೋರ್ಪಡೆ ಉಪನ್ಯಾಸ ನೀಡುವರು. ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ್ ನಾಯಕ ಆಗಮಿಸುವರು. ಶಿಕ್ಷಣಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಾ. ವೈ.ಆರ್. ಹಿರೇಗೌಡರ ಪ್ರಕಟಣೆಯ ಮೂಲಕ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement