ಜಲಾಶಯದಿಂದ ನೀರು ಬಿಡುಗಡೆ (ಸುದ್ದಿ ಸಂಕ್ಷೇಪ)
ಗದಗ: ಜ. 20ರ ಸಂಜೆ 6 ಗಂಟೆಯಿಂದ ಮೊದಲ ಮೂರು ದಿನಗಳು 500 ಕ್ಯೂಸೆಕ್ನಂತೆ ಹಾಗೂ ನಂತರದ ದಿನಗಳಲ್ಲಿ 200-250 ಕ್ಯೂಸೆಕ್ನಂತೆ ಅವಶ್ಯಕತೆಗನುಗುಣವಾಗಿ ನೀರಿನ ಪ್ರಮಾಣವನ್ನು ನಿಯಂತ್ರಿಸಿ ಜನವರಿ 31, 2013ರ ವರೆಗೆ ಭದ್ರಾ ಜಲಾಶಯದಿಂದ ನೀರು ಬಿಡಲಾಗುವುದು. ಆದುದರಿಂದ ನದಿ ದಂಡೆಯಲ್ಲಿನ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಮಾಡುವುದು ಇತ್ಯಾದಿ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಜಂತ್ಲಿ ಓಣಿ, ಕುಂಬಾರ ಓಣಿ, 8ನೇ ನಂಬರ ಶಾಲೆ, ದ್ಯಾಮವ್ವನ ಗುಡಿಲೈನ್, ಯಲಿಗಾರ ಪ್ಲಾಟ್, ಸೋಮನಗೌಡ್ರ ಲೈನ್, ಹನುಮನಗರಡಿ, ಕುಲಕರ್ಣಿ ಗಲ್ಲಿ, ಕಾಳಮ್ಮನಗುಡಿ ಲೈನ್, ವಿಭೂತಿ ಓಣಿ, ಹಾರೋಗೇರಿ ಲೈನ್, ದ್ರೌಪದಿ ಲೈನ್, ಕೋಟಿಯವರ ಲೈನ್, ಅಲಬುರ ಲೈನ್, ಕಾಗದಗಾರ ಲೈನ್, ಹಾವನೂರ ಸಂದಿ, ಚವ್ಹಾಣರ ಮನೆ ಹಿಂದಿನ ಲೈನ್, ವೀರನಾರಾಯಣ ಗುಡಿಲೈನ್, ಕೊನೇರಿ ಹೊಂಡ ಈ ಭಾಗಗಳಲ್ಲಿ ಬುಧವಾರ ತುಂಗಭದ್ರಾ ನದಿನೀರು ಪೂರೈಕೆ ಮಾಡಲಾಗುವುದು.
ಆದರ್ಶ ವಿದ್ಯಾಲಯಕ್ಕೆ ನ್ಯಾಕ್ ಎ ಗ್ರೇಡ್
ಗದಗ: ಸ್ಥಳೀಯ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯಕ್ಕೆ ಸೆಪ್ಟೆಂಬರ್-12 ನ್ಯಾಕ್ ತಂಡವು ಭೇಟಿ ನೀಡಿತ್ತು. ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಪರಿಶೀಲನೆ ನಡೆಸಿ ಮಹಾವಿದ್ಯಾಲಯಕ್ಕೆ ಎ ಗ್ರೇಡ್ ನೀಡಿದ್ದಾರೆ. ಸಂಸ್ಥೆಯ ಅಧ್ಯಕ್ಷ ವಿ.ಆರ್. ಕುಷ್ಟಗಿ, ಉಪಾಧ್ಯಕ್ಷ ವಿ.ಆರ್. ಮಾಳೆಕೊಪ್ಪಮಠ, ಕಾರ್ಯದರ್ಶಿ ಪಿ.ಆರ್. ಅಡವಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ, ನ್ಯಾಕ್ ಕೋ ಆರ್ಡಿನೇಟರ್ ಐ.ವಿ. ಬೆಳ್ಳಿಕಟ್ಟಿ, ವಿ.ಕೆ. ಸೊರಟೂರ, ಪ್ರೊ. ಸಿ.ಎಂ. ಪಾಟೀಲ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.