ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶರಣಪ್ಪ ಗದಗ ನೂತನ ಎಸ್ಪಿ

Mainashree
Updated On : 24 Jan 2013, 10:43 am

ಗದಗ: ಜಿಲ್ಲೆಯ ನೂತನ ಎಸ್ಪಿಯಾಗಿ ಶರಣಪ್ಪ ಎಸ್.ಡಿ. ಬುಧವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಸಾಗರದ ಎಡಿಶನ್ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಮೊದಲ ಬಾರಿಗೆ ಸ್ವತಂತ್ರ ಎಸ್ಪಿಯಾಗಿ ಕಾರ್ಯಭಾರ ನಡೆಸಲಿದ್ದಾರೆ. ಕಳೆದ 3 ವರ್ಷದಿಂದ ಗದಗ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಕುಮಾರ ನಾಯಕ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಆದ್ಯತೆ
ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸೇರಿದಂತೆ, ಪೊಲೀಸ್ ಇಲಾಖೆಯ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದರೊಟ್ಟಿಗೆ ಹೊಸ ಚಿಂತನೆಯ ಮೂಲಕ ಇಲಾಖೆಯಲ್ಲಿ ಹೊಸ ಬದಲಾವಣೆ ತರಲು ಯೋಜನೆ ರೂಪಿಸಲಾಗಿದೆ.
 ಸದ್ಯದಲ್ಲಿಯೇ ಇಲಾಖೆಯ ಬೆಳವಣಿಗೆ ಮತ್ತು ಹೊಸ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ನಿರ್ಗಮಿತ ಎಸ್ಪಿ ರವಿಕುಮಾರ ನಾಯಕ, ಡಿಎಸ್ಪಿ ಕುಂಬಾರ, ಗದಗ ಶಹರ ಸಿಪಿಐ ಸಂತೋಷ ಪವಾರ, ಗ್ರಾಮೀಣ ಸಿಪಿಐ ನಾಗರಾಜ ಅಂಬಲಿ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement