ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪೈಗಂಬರ್ ಜಯಂತಿ ನಿಮಿತ್ತ ಬೈಕ್ ರ್ಯಾಲಿ

Mainashree
Updated On : 25 Jan 2013, 10:59 am

ಕನ್ನಡಪ್ರಭ ವಾರ್ತೆ, ಗದಗ, ಜ. 24
ಮನುಕುಲದ ಏಳ್ಗೆಯೊಂದಿಗೆ ಧಾರ್ಮಿಕ ಜಾಗೃತಿಗೆ ಶ್ರಮಿಸಿದ ಹಜರತ್ ಮಹ್ಮದ್ ಪೈಗಂಬರರ ಜೀವನ, ತತ್ವ ಹಾಗೂ ಸಿದ್ಧಾಂತಗಳು ಅನುಕರಣೀಯವಾಗಿವೆ ಎಂದು ಅಂಜುಮನ್-ಈ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಸಾಧಿಕ್ ನರಗುಂದ ಹೇಳಿದರು.
ಹಜರತ್ ಮಹಮದ್ ಪೈಗಂಬರರ ಜಯಂತ್ಯುತ್ಸವ ನಿಮಿತ್ತ ಈದ್ ಮಿಲಾದ್ ಕಮಿಟಿ ಆಶ್ರಯದಲ್ಲಿ ಗುರುವಾರ ಬೆಳಗ್ಗೆ ನಗರದ ಹಳೆ ಬಸ್ ನಿಲ್ದಾಣ ಹತ್ತಿರದ ಉರ್ದು ಸೆಂಟ್ರಲ್ ಸ್ಕೂಲ್ ಮೈದಾನದಿಂದ ನಡೆದ ಬೈಕ್ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ಇಸ್ಲಾಂ ಧರ್ಮ ಶಾಂತಿ, ಸಹಬಾಳ್ವೆ ಹಾಗೂ ಸಮಾನತೆ ಸಾರಿದೆ. ಮಾನವರು ಸೃಷ್ಟಿಕರ್ತನ ಹೆಸರಲ್ಲಿ ಅನುಸರಿಸುತ್ತಿದ್ದ ಮೂಢನಂಬಿಕೆಗಳನ್ನು ಪೈಗಂಬರರು ದೂರೀಕರಿಸಿ ಸಮಾಜಕ್ಕೆ ಹೊಸ ಬೆಳಕು ನೀಡಿದರು ಎಂದರು. ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಎಂ.ಐ. ನವಲೂರ, ಪ್ರಧಾನ ಕಾರ್ಯದರ್ಶಿ ನಿಸಾರ ಅಹ್ಮದ ಖಾಜಿ ಮಾತನಾಡಿದರು.
ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಪೀರಸಾಬ ಕೌತಾಳ, ಭರತ್ ಇರಾಳ, ವಿಜಯ ಮುಳಗುಂದ, ಕಮಿಟಿಯ ಪದಾಧಿಕಾರಿಗಳಾದ ಜಿ.ಎಂ. ದಂಡಿನ, ಅಬೂಬಕ್ಕರ ಅಣ್ಣಿಗೇರಿ, ಎನ್.ಕೆ. ಕೊರ್ಲಹಳ್ಳಿ, ಸಮೀರ ನಾಗರಕಟ್ಟಿ, ಕಾಸಿಂಸಾಬ ಕಿಲ್ಲೇದಾರ, ಬಾಬಾಜಾನ ಬಳಗಾನೂರ, ಮುನ್ನಾ ರೇಷ್ಮೆ, ಬನ್ನೂರಸಾಬ, ಆಸೀಫ್ ಮುಲ್ಲಾ, ಅಲ್ತಾಫ ರಾಣೇಬೆನ್ನೂರ, ಖಾದರಸಾಬ ಬನ್ನೂರ, ರಫೀಕ್ ಅಬ್ಬಿಗೇರಿ, ರಿಜ್ವಾನ್ ಪಾಚಾಪುರ, ನಾಸೀರ ನರೇಗಲ್, ಶಬ್ಬೀರ ರಗಟಿ, ಖಾಸಿಂ ಕಿಲ್ಲೇದಾರ, ಇರ್ಫಾನ್ ಮುಲ್ಲಾ, ಇಲಿಯಾಸ್ ಖೈರಾತಿ, ಸಮೀರ ಚಟ್ನಾಳ, ರಬ್ಬಾನಿ ಮುಲ್ಲಾ, ಜಬ್ಬಾರ ದಿವಟಿಹಾಳ, ರಾಜೇಖಾನ ಪಠಾಣ್, ಅನ್ವರ್ ಶಿರಹಟ್ಟಿ, ಇಮ್ತಿಯಾಜ್ ಬಬರ್ಚಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement