ಗದಗ

ಅಂಜನಾದ್ರಿಗೆ ಪಾದಯಾತ್ರೆ

ಅಂಜನಾದ್ರಿಗೆ ಪಾದಯಾತ್ರೆಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಗುರುವಾರ ಸಂಜೆ ಹಂಪಿ ಸಮೀಪದಲ್ಲಿರುವ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಪರ್ವಕ್ಕೆ ಪಾದಯಾತ್ರೆ ಕೈಗೊಂಡರು.
ಉತ್ತರ ಕರ್ನಾಟಕ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ಹನುಮ ಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕೋಟುಮಚಗಿ ಮಾಲಾಧಾರಿಗಳು ಜ. 18ರಿಂದ ವ್ರತಾಚರಣೆ ಕೈಗೊಂಡು ಜ. 27ಕ್ಕೆ ಅಂಜನಾದ್ರಿ ಪರ್ವತದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸ್ವಸ್ಥಾನಕ್ಕೆ ಬಂದು ಮಾಲೆಯನ್ನು ವಿಸರ್ಜಿಸಿ ವ್ರತವನ್ನು ಮುಕ್ತಾಯಗೊಳಿಸುವರು.
  ಪಾದಯಾತ್ರೆಗೆ ಗದಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಶ್ರೀಧರ ಕುಲಕರ್ಣಿ ಹಾಗೂ ಗದಗ ಜಿಲ್ಲಾ ಭಜರಂಗದಳ ಸಂಯೋಜಕ ಮಾರುತಿ ಪವಾರ ಚಾಲನೆ ನೀಡಿದರು. ಗುರುವಾರ ಬೆಳಗ್ಗೆ ಗ್ರಾಮದೇವತೆ ದುರ್ಗಾದೇವಿ, ಸೋಮೇಶ್ವರ, ಜಿಂದಾಶಾವಲಿ ದರ್ಗಾ, ವೀರಭದ್ರೇಶ್ವರ, ಶರಣಬಸವೇಶ್ವರ, ಕಲ್ಲಿನಾಥೇಶ್ವರ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಹಿರಿಯರಾದ ಆರ್.ವಿ. ಕುಲಕರ್ಣಿ, ವಿಶ್ವಹಿಂದೂ ಪರಿಷತ್ ಗ್ರಾಮಘಟಕದ ಗೌರವಾಧ್ಯಕ್ಷ ದೇವಪ್ಪ ಕಾಡರ, ಸುಗಂಧಪ್ಪ ಬಡಿಗೇರ, ರಂಗಪ್ಪ ತಳವಾರ, ಆನಂದ ಕಟಗಳ್ಳಿ, ಹನುಮಂತ ಅಬ್ಬಿಗೇರಿ, ಸಿದ್ದಪ್ಪ ಗೊಡಚಪ್ಪನವರ, ಮಾಲಾಧಾರಿಗಳಾದ ಶರಣಪ್ಪ ಕಾಡರ, ಮಹದೇವಗೌಡ ಸಂಕನಗೌಡ್ರ, ಸುರೇಶ ಮೀಸಿ, ನವೀನ ಪಾಟೀಲ, ಜಗದೀಶ ಚಿಂಚಲಿ, ಕಳಕೇಶ ಗಡಾದ, ಸತೀಶ ಕಿತ್ತೂರ, ಈರಣ್ಣ ಹೂಗಾರ, ಮುತ್ತಪ್ಪ ಬೂನಕೊಪ್ಪ, ಶಿವು ಹುಯಿಲಗೋಳ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?