ಇಂದು ಶಿವಯ್ಯ ಶ್ರೀಗಳ ಪುಣ್ಯಸ್ಮರಣೆ
ನರಗುಂದ: ಪಟ್ಟಣದ ಪತ್ರಿವನಮಠದ ಗುರು ಶಿವಯ್ಯ ಶ್ರೀಗಳ 61ನೇ ಪುಣ್ಯಸ್ಮರಣೆ ಹಾಗೂ ಗುರು ಶಂಭುಲಿಂಗ ಶ್ರೀಗಳ 3ನೇ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ತ ಜ. 26 ರಂದು ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹೊಸಯರಗುದ್ರಿ ಸಿದ್ಧಪ್ರಭ ಶ್ರೀಗಳು, ಬೀಳಗಿ ಅನ್ನಪೂರ್ಣೇಶ್ವರಮಠದ ಶಿವಾನಂದ ಶ್ರೀಗಳು, ಅಳಗವಾಡಿ ಆನಂದ ಆಶ್ರಮದ ಮೈಲಾರಿ ಹುಚ್ಚಯ್ಯ ಶ್ರೀಗಳು, ಎಸ್.ಬಿ. ಕುಷ್ಟಗಿ, ಸಿ.ಆರ್. ಹಿರೇಮಠ, ಚನ್ನಪ್ಪ ಹಡಪದ, ಅನಿಲ ಧರಯಣ್ಣವರ, ಪ್ರೊ. ಎಸ್.ಎನ್. ಕಾತರಕಿ, ಚಂದ್ರಶೇಖರ ಕೋಟಿ, ಆರ್.ಪಿ. ಜಾಧವ, ಅಡಿವೆಪ್ಪ ಜಾಲಿಕೊಪ್ಪ ಮುಂತಾದವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.