ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೋಸ್ ಕ್ರಾಂತಿಕಾರಿ ವ್ಯಕ್ತಿ: ಘೋರ್ಪಡೆ

Mainashree
Updated On : 26 Jan 2013, 10:58 am

ಕನ್ನಡಪ್ರಭ ವಾರ್ತೆ, ಗದಗ, ಜ. 25
ಸುಭಾಶ್ಚಂದ್ರ ಬೋಸ್‌ರು ಭಾರತೀಯ ಸಂಪನ್ಮೂಲಗಳನ್ನು ಬ್ರಿಟಿಷರು ಬಳಸಕೂಡದೆಂದು ಪ್ರತಿಭಟಿಸಿದಾಗ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು. ಆಜಾದ್ ಹಿಂದ್ ಫೌಜ್ ಎಂಬ ಸೈನ್ಯ ಕಟ್ಟಿ ಅದರ ಪ್ರಧಾನ ದಂಡಾಧಿಕಾರಿಯಾದರು. ಬಳಿಕ ಅದರ ತಾತ್ಕಾಲಿಕ ಸರ್ಕಾರವನ್ನ ಘೋಷಿಸಿದ ಕ್ರಾಂತಿಕಾರಿ ವ್ಯಕ್ತಿ ಎಂದು ಸುಧೀರ ಘೋರ್ಪಡೆ ಹೇಳಿದರು.
ಬುಧವಾರ ಬೆಳಗ್ಗೆ ನಗರದ ಗಾಂಧಿ ವೃತ್ತದಲ್ಲಿ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಲಾದ ನೇತಾಜಿ ಸುಭಾಶ್ಚಂದ್ರ ಬೋಸ್‌ರ 116ನೇ ಜಯಂತಿ ಅಂಗವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನಗೆ ನಿಮ್ಮ ಶಕ್ತಿ ಕೊಡಿ, ನಾನು ನಿಮಗೆ ಸ್ವತಂತ್ರ ಭಾರತವನ್ನು ನೀಡುತ್ತೇನೆ, ಸ್ವಾತಂತ್ರ್ಯ ಬೇಡಿ ಪಡೆಯುವ ವಸ್ತುವಲ್ಲ, ರಕ್ತ ಹರಿಸಿ ಬಲಿದಾನ ಮಾಡಿ ಪಡೆಯುವ ವಸ್ತು ಎಂದು ಹೇಳಿದ ಬೋಸ್, 'ಜೈ ಹಿಂದ್‌' ಘೋಷಣೆ ಕೊಟ್ಟರು. ವಿದ್ಯಾರ್ಥಿಗಳು ಬೋಸರಂತೆ ಸ್ವಾಭಿಮಾನಿಗಳಾಗಿ ಬದುಕಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ಬೋಸ್‌ರು 1941ರಲ್ಲಿ ವಿದೇಶಕ್ಕೆ ಹೋಗಲು ಪಠಾಣರ ವೇಷ ಧರಿಸಿ ಗೃಹ ಬಂಧನದಿಂದ ಪಾರಾಗಿ ಕಾಬೂಲ್ ಮಾರ್ಗವಾಗಿ ಬರ್ಲಿನ್‌ಗೆ ಹೋಗಿ, ಜರ್ಮನಿಯಲ್ಲಿ ಭಾರತೀಯರನ್ನು ಸಂಘಟಿಸಿ ಸ್ವತಂತ್ರ ಸೈನ್ಯವನ್ನು ಕಟ್ಟಿದರು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನು ಒಮ್ಮೆ ಸುಭಾಸರ ಸೇನಾ ಶಿಬಿರಕ್ಕೆ ಭೇಟಿ ನೀಡಿ ಸುಭಾಷ ನನಗಿಂತ ಮೇಧಾವಿ. ಇಂತಹ ನಾಯಕನನ್ನು ಪಡೆದ ಭಾರತ ಧನ್ಯವೆಂದು ಹೇಳಿದ್ದರು. ಐಎನ್‌ಎ ಸ್ಥಾಪಿಸಿ, ಭಾರತದ ವಿಮೋಚನೆಗಾಗಿ ಹೋರಾಡಿದ ಬೋಸ್, 1943ರ ಅ. 21ರಂದು ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ಘೋಷಣೆ ಮಾಡಿದರು ಎಂದು ಸ್ಮರಿಸಿದರು.
ರಾಷ್ಟ್ರಧ್ವಜದೊಂದಿಗೆ ಸುಭಾಶ್ಚಂದ್ರ ಬೋಸ್‌ರ ರೂಪಕ ಧರಿಸಿದ ವಿದ್ಯಾರ್ಥಿ ವೆಂಕಟೇಶ ಪೂಜಾರ ನೇತೃತ್ವದಲ್ಲಿ ಮಹಾರಾಣಾ ಪ್ರತಾಪಸಿಂಹ ಕಾಲೇಜಿನಿಂದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನಗರದ ಬಾಲಾಜಿ ರಸ್ತೆ, ಪಿ.ಬಿ. ರಸ್ತೆ, ಅಂಡರ್ ಬ್ರಿಜ್, ಸ್ಟೇಶನ್ ರಸ್ತೆ ಮೂಲಕ ಮಹಾತ್ಮಾ ಗಾಂಧೀಜಿ ವೃತ್ತ ತಲುಪಿ, ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರಾಚಾರ್ಯ ವೈ.ಆರ್. ಹಿರೇಗೌಡರ ಸ್ವಾಗತಿಸಿದರು. ಪ್ರೊ೤ ಡಿ.ಎಸ್. ನಾಯಕ ನಿರೂಪಿಸಿದರು. ಪ್ರೊ೤ ಎಸ್.ಆರ್. ವಾಲ್ಮೀಕಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement