ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳು ಪ್ರಜ್ಞಾವಂತರಾಗಿ: ಹಳ್ಯಾಳ

Mainashree
Updated On : 26 Jan 2013, 10:58 am

ಕನ್ನಡಪ್ರಭ ವಾರ್ತೆ, ರೋಣ, ಜ.. 25
ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು, ಯುವಕರು ಎಚ್ಚೆತ್ತುಕೊಂಡು ಪ್ರಜ್ಞಾವಂತರಾಗಿ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ.ಎಸ್.ಹಳ್ಯಾಳ ಹೇಳಿದರು.
ಅವರು ಈಚೆಗೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) 2012-13ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಿಥುನ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಿಂದ ಉದ್ದೇಶ, ಗುರಿಯನ್ನು ತಲುಪಬೇಕು. ಸದಾ ಚಿಂತನಶೀಲರಾಗಿ ಕಾರ್ಯ ನಿರ್ವಹಿಸುವದು ಮುಖ್ಯ. ವಿದ್ಯಾರ್ಥಿ ದಿಸೆಯಲ್ಲಿ ಶ್ರಮವಹಿಸಿ ಅಭ್ಯಸಿಸಿದಲ್ಲಿ ಭವಿಷ್ಯದ ಜೀವನ ಉಜ್ವಲಗೊಳ್ಳುತ್ತದೆ. ಕಲಿಸಿದ ವಿದ್ಯಾ ಸಂಸ್ಥೆ, ಬೋಧಿಸಿದ ಗುರುವನ್ನು ಎಂದಿಗೂ ಮರೆಯಬಾರದು ಎಂದರು.
ಸಮಾರಂಭದಲ್ಲಿ ಪ್ರಾಚಾರ್ಯ ವೈ.ಎನ್. ಪಾಪನ್ನವರ, ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು. 2011-12ನೇ ಸಾಲಿನಲ್ಲಿ ಬಿ.ಇಡಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಶಿಕ್ಷಣಾರ್ಥಿ ಕುಮಾರಿ ಸವಿತಾ ರೋಣದರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರಪಾದ ಶ್ರೀಗಳು ವಹಿಸಿದ್ದರು. ಡಾ. ಎಲ್.ಆರ್.ರಡ್ಡೇರ, ಪ್ರೊ. ಎಚ್.ಆರ್. ಮೇಟಿ, ಡಾ. ಕೆ.ಬಿ.ಧನ್ನೂರ, ಶಿವಾನಂದ ಐವಳ್ಳಿ, ಎಚ್.ಆರ್. ದೊಡ್ಡಮನಿ, ಶರಣು ಗೋದಿ, ಶಿದ್ದಪ್ಪ ಪಿ, ಮೌನೇಶ ಬಡಿಗೇರ ಉಪಸ್ಥಿತರಿದ್ದರು. ಹೊನಕೇರಪ್ಪ ಕಟ್ಟಿಮನಿ, ನಂದಿನಿ ನಡುವಿನಮನಿ ನಿರೂಪಿಸಿದರು. ಬಿ.ಎಫ್. ಚೇಗರಡ್ಡಿ ಸ್ವಾಗತಿಸಿದರು. ಪ್ರಕಾಶ ಇಲಕಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement