ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಾರತ ಶಕ್ತಿಶಾಲಿ ರಾಷ್ಟ್ರ

Mainashree
Updated On : 27 Jan 2013, 11:17 am

ಮುಂಡರಗಿ: ಭಾರತ ಬಲಿಷ್ಠ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿ ಜಾಗತಿಕವಾಗಿ ಪ್ರಬಲ ಹಾಗೂ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ತಹಸೀಲ್ದಾರ್ ಎ.ಟಿ. ನರೇಗಲ್ ಹೇಳಿದರು.
ಅವರು ಶನಿವಾರ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಲಾಗಿದ್ದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸರ್ಕಾರ ಸರ್ವರಿಗೂ ಶಿಕ್ಷಣ, ಆರೋಗ್ಯ, ಆಹಾರ, ಸೂರು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. 2012ರ ಎಪ್ರಿಲ್ 1ರಿಂದ ಜಾರಿಯಲ್ಲಿರುವ ಸಕಾಲ ಆಯಾ ಸೇವೆಗೆ ಸಂಬಂಧಿಸಿದಂತೆ ಅವಧಿಯನ್ನು ನಿಗದಿಪಡಿಸಿಕೊಂಡು ವಿಳಂಬವಾಗದಂತೆ ನಿಗದಿತ ಅವಧಿಯಲ್ಲಿ ಕಾರ್ಯ ಮಾಡಿಕೊಡುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ಪ್ರಾರಂಭಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣದ ಮೂಲಕ ನೇರವಾಗಿ ಇಲಾಖೆಯೇ ಜನಸ್ನೇಹಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದರು. ಪುರಸಭೆ ಉಪಾಧ್ಯಕ್ಷ ಶಿವನಗೌಡ ಗೌಡ್ರ, ಸದಸ್ಯ ರಾಮು ಕಲಾಲ, ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಪ್ರೊ. ರಾಜೇಶ್ವರಿ ಇನಾಮದಾರ್ ಅತಿಥಿ ಉಪನ್ಯಾಸ ಮಾಡಿದರು. ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಶೇಖವ್ವ ಸಂಗಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಲಪ್ಪ ದೇಸಾಯಿ, ಗುಡದಪ್ಪ ಲಿಂಗಶೆಟ್ಟರ, ಪಿ.ಆರ್.ಕಳ್ಳಿ ಸೇರಿ ಹಲವರನ್ನು ತಾಲೂಕು ಆಡಳಿತದ ಪರವಾಗಿ ಸನ್ಮಾನಿಸಲಾಯಿತು.
 ತಾಪಂ ಅಧ್ಯಕ್ಷೆ ತಾರೂಬಾಯಿ ಚವ್ಹಾಣ, ಆರ್.ಎಂ. ಪಾಟೀಲ, ವಿ.ಎಸ್. ಪರಿಮಳ, ಎಂ.ಎ. ರಡ್ಡೇರ, ಸುನೀಲ ಸವದಿ, ಮಂಜುನಾಥ ಇಟಗಿ, ಎಂ.ಜಿ. ವಡ್ಡಟ್ಟಿ, ದೇವಪ್ಪ ಇಟಗಿ, ವಿಜಯಕುಮಾರ ರಾಟಿ, ನೂರಜಾನ ತಳಗಡೆ, ಬಸವರಾಜ ನವಲಗುಂದ, ವೀರಣ್ಣ ಘಟ್ಟಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಆರಕ್ಷಕ ಸಿಬ್ಬಂದಿ ಎನ್.ಸಿ.ಸಿ. ಗೃಹರಕ್ಷಕದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಜರುಗಿತು. ತಾಪಂ ಇಓ ಎಸ್.ವಿ. ತಿಗರಿಮಠ ಸ್ವಾಗತಿಸಿದರು. ಪ್ರೊ. ಸಿ.ಎಸ್.ಅರಸನಾಳ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement