ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಮಾಜಿಕ ಮೌಲ್ಯ ಕಾಪಾಡಿ

Mainashree
Updated On : 27 Jan 2013, 11:17 am

ಶಿರಹಟ್ಟಿ: ಭಾರತವು ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿಯನ್ನು ಸಾಧಿಸಿದೆ. ಆದರೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಅದಕ್ಕಾಗಿ ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಹಸೀಲ್ದಾರ್ ಆರ್.ಡಿ. ಉಪ್ಪಿನ ಹೇಳಿದರು.
ಅವರು ಶನಿವಾರ ಪಟ್ಟಣದ ಕಂದಾಯ ಇಲಾಖೆ ಸಂಕಿರ್ಣ ತಾಲೂಕು ಕಚೇರಿ ಶಿರಹಟ್ಟಿಯಲ್ಲಿ 64ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಐಖ್ಯತೆ, ಸಮಗ್ರತೆಗೆ ಕಂಕಣ ಬದ್ದರಾಗಬೇಕು. ಜನಸಂಖ್ಯೆ ಮಿತಿಗೊಳಿಸಿ ಅಭಿವೃದ್ಧಿಯತ್ತ ಸಾಗಬೇಕು. ಸರ್ಕಾರದ ಕಡೆ ಕೈ ಚಾಚದೇ ಸ್ವಾವಲಂಬಿಗಳಾಗಿ ಬದುಕಲು ಪಣತೊಡಬೇಕು. ದೇಶದ ಸಮಸ್ತ ನಾಗರಿಕರಿಗೆ ಸಮಾನ ಸ್ಥಾನಮಾನ ಒದಗಿಸಲು ರಾಷ್ಟ್ರದ ಸರ್ವಾಂಗೀಣ ಪ್ರಗತಿಯ ಜತೆಗೆ ಸುಭದ್ರ ಸಾರ್ವಭೌಮ ರಾಷ್ಟ್ರಕಟ್ಟಲು ಯುವಕರು ಪಣ ತೊಡಬೇಕು ಎಂದು ಕರೆ ನೀಡಿದರು.  ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಜಾತಿ, ಭಾಷೆ, ಗಡಿ ತಂಟೆ, ಭಯೋತ್ಪಾದನೆ ದೇಶದಲ್ಲಿ ತಾಂಡವಾಡುತ್ತಿದ್ದು, ಇದರ ಸಂಪೂರ್ಣ ನಿರ್ಮೂಲನೆಗಾಗಿ ಹೋರಾಡಬೇಕಾಗಿದೆ. ಭವ್ಯ ಭಾರತ ಕಟ್ಟಲು ಏಕತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವವರು ಬರಿ ಸುಳ್ಳು ಹೇಳುತ್ತಾ, ಮೊಸಳೆ ಕಣ್ಣೀರನ್ನು ಸುರಿಸಿದರೆ ಜನತೆ ಕ್ಷಮಿಸುವುದಿಲ್ಲ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಸುನಂದ ಬಿದರಳ್ಳಿ, ಉಪಾಧ್ಯಕ್ಷೆ ಶಾರದಾ ಕವಲೂರ, ಪಪಂ ಅಧ್ಯಕ್ಷ ಹುಮಾಯೂನ ಮಾಗಡಿ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕಮಲವ್ವ ಸಜ್ಜನರ, ಪಪಂ ಉಪಾಧ್ಯಕ್ಷ ಯಲ್ಲಪ್ಪಗೌಡ ಅಣ್ಣಿಗೇರಿ, ಸಿಪಿಐ ಪಿ.ಬಿ. ನಾಯ್ಡು, ಪಿಎಸ್‌ಐ ವಿಕಾಸ ಲಮಾಣಿ, ಇಓ ವೈ.ಎಲ್. ಹಂಪಣ್ಣ, ನೌಕರ ಸಂಘದ ಅಧ್ಯಕ್ಷ ಪಿ.ಎಂ. ಹಡಗಲಿ, ಬಿ.ಎನ್. ರಾಟಿ, ಎಸ್.ಕೆ. ಉಗಲಾಟ ಮುಂತಾದವರು ಉಪಸ್ಥಿತರಿದ್ದರು. ಎಸ್.ಬಿ. ಕೋರಿಶೆಟ್ಟರ್ ಸ್ವಾಗತಿಸಿದರು. ಎಂ.ಕೆ. ಲಮಾಣಿ ನಿರೂಪಿಸಿದರು. ಕೆ.ಎ. ಬಳಿಗೇರ ವಂದಿಸಿದರು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement