ಇಂದು ಪುಣ್ಯಾರಾಧನೆ ಸಮಾರೋಪ
ನರಗುಂದ: ಪಟ್ಟಣದ ಪತ್ರಿವನಮಠದ ಶಿವಯ್ಯ ಅಜ್ಜನವರ 61ನೇ ಹಾಗೂ ಶಂಭುಲಿಂಗ ಅಜ್ಜನವರ 3ನೇ ಪುಣ್ಯಾರಾಧನೆ ಸಮಾರೋಪ ಕಾರ್ಯಕ್ರಮ ಜ. 29ರಂದು ಬೆಳಗ್ಗೆ 11 ಗಂಟೆಗೆ ಪತ್ರಿವನ ಮಠದ ಆವರಣದಲ್ಲಿ ನಡೆಯಲಿದೆ. ಸಾನ್ನಿಧ್ಯವನ್ನು ಕಿಲ್ಲಾ ತೊರಗಲ್ಲಿ ಗಚ್ಚಿನ ಹಿರೇಮಠದ ಚನ್ನಮಲ್ಲ ಶ್ರೀಗಳು, ಪತ್ರಿವನ ಮಠದ ಸಿದ್ದವೀರ ಶ್ರೀಗಳು, ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀಗಳು, ಗುರುನಾಥ ಶಾಸ್ತ್ರೀಗಳು ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಸಿ.ಸಿ. ಪಾಟೀಲ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕೋಟಿ, ಉಪಾಧ್ಯಕ್ಷ ಉಮೇಶ ಯಮೋಜಿ, ಗುರಪ್ಪ ಆದೆಪ್ಪನವರ, ಅಜ್ಜಪ್ಪ ಹುಡೇದ, ಉಪಾಧ್ಯಕ್ಷ ಶಾಂತವ್ವ ಅಂಗಡಿ, ಪುರಸಭೆ ಸದಸ್ಯ ಪ್ರಕಾಶ ಪಟ್ಟಣಶಟ್ಟಿ, ಈಶ್ವರಯ್ಯ ಮಠಪತಿ ಭಾಗವಹಿಸುವರು.