ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

Rashmi Kasaragodu
Updated On : 31 Jan 2013, 11:11 am

ನರಗುಂದ: ಉತ್ತರ ಕರ್ನಾಟಕ ರೈತ ಸಮುದಾಯದ ಬಹು ದಿನಗಳ ಬೇಡಿಕೆಯಾಗಿರುವ ಕಳಸಾ ಬಂಡೂರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಶಿರಕೋಳದ ಗುರುಸಿದ್ಧವೀರ ಶ್ರೀಗಳು ಆಗ್ರಹಿಸಿದರು.
ಅವರು ಬುಧವಾರ ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ಮಠಾಧೀಶರ ನಡೆ ಕಳಸಾ ಬಂಡೂರಿ ಕಡೆ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದರು. 2 ವರ್ಷದಿಂದ ರೈತ ಸಮುದಾಯ ಭೀಕರ ಬರಗಾಲದಿಂದ ತತ್ತರಿಸಿದೆ. ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಕೂಡಲೇ ಕಳಸಾ ಬಂಡೂರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ವಿಳಂಬವಾದಲ್ಲಿ ಈ ಭಾಗದ ಮಠಾಧೀಶರು ಹಾಗೂ ರೈತರನ್ನೊಳಗೊಂಡು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಲಾಗುವುದು ಎಂದರು.
ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಈ ಯೋಜನೆಗಾಗಿ ಕಳೆದ 15-20 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಆದರೂ ಕೂಡ ಸರ್ಕಾರವು ಯೋಜನೆ ಪೂರ್ಣಗೊಳಿಸಲು ವಿಳಂಬ ಮಾಡುತ್ತಿದ್ದು, ಇದೇ ರೀತಿಯಾದಲ್ಲಿ ಸರ್ಕಾರದ ವಿರುದ್ಧ ರೈತರು ದಂಗೆ ಏಳಲಿದ್ದಾರೆಂದು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿದ್ದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿದರು.
ನೇಗಿಲು ಕಾಯಕ ಯೋಗಿ ಎಂಬ ಪುಸ್ತಕ ರಚನೆ ಮಾಡಿದ ಶ್ರೀಕಾಂತ ನವಲಗುಂದರ ಪುಸ್ತಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನವಲಗುಂದ ಪಂಚಗೃಹಗುಡ್ಡದ ಹಿರೇಮಠದ ಶಿದ್ದೇಶ್ವರ ಶ್ರೀಗಳು, ಮುನವಳ್ಳಿ ಮುರಾಗರಾಜೇಂದ್ರ ಶ್ರೀಗಳು, ಗುಳೇದಗುಡ್ಡದ ಕಾಡಸಿದ್ದೇಶ್ವರ ಶ್ರೀಗಳು, ತುಪ್ಪದ ಕುರಹಟ್ಟಿ ವಾಗೀಶ ಶ್ರೀಗಳು, ಬೆಳ್ಳೇರಿ ಶಿವಾನಂದ ಶ್ರೀಗಳು, ಎಪಿಎಂಸಿ ಸದಸ್ಯ ಸಿ.ಎಸ್. ಪಾಟೀಲ, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ, ಚಳಪ್ಪ ನಾಯ್ಕರ, ಬಸನಗೌಡ ಚಿಕ್ಕನಗೌಡ್ರ, ಬಸಪ್ಪ ಗುಡೇದರಿ, ದೇಸಾಯಗೌಡ್ರ, ಅಲ್ಲಸಾಬ ನದಾಫ, ರುದ್ರಪ್ಪ ಗಾಣಿಗೇರಿ, ಎಂ.ಬಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement