ಕೊಪ್ಪಳ ಗವಿಸಿದ್ಧೇಶ್ವರಜಾತ್ರೆಯಲ್ಲಿ ಇಂದು
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜ. 31ರಂದು ನಡೆಯಲಿದ್ದು, ಮಧ್ಯಾಹ್ನ 2ಕ್ಕೆ ಮುಂಗೈ ಕುಸ್ತಿ ಸ್ಪರ್ಧೆ ಜರುಗಲಿದೆ. ಸಂಜೆ 6ಕ್ಕೆ ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಬಸವ ಪ್ರಶಸ್ತಿ ಪುರಸ್ಕೃತ ಇಲಕಲ್ನ ವಿಜಯ ಮಹಾಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರೇಮಗಳೂರು ಕಣ್ಣನ್ ಮಾತನಾಡಲಿದ್ದಾರೆ. ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿರುವರು.
ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಪಂ. ರಘುನಾಥ ನಾಕೋಡ ಹಾಗೂ ಡಾ. ರವಿಕಿರಣ ತಂಡದಿಂದ ತಾಳ ತರಂಗ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿವೆ.
ರವಿಂದ್ರ ಸೋರಗಾಂವಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ವಿಶೇಷವಾಗಿ ಗಂಗಾವತಿಯ ಬಿ.ಪ್ರಾಣೇಶ, ನರಸಿಂಹ ಜೋಷಿ ಅವರಿಂದ ಹಾಸ್ಯೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.