ಗುರುವಚನ ಪಾಲಿಸಿ: ಎಂ.ಎಫ್. ಯಲಿಗಾರ
ನರಗುಂದ: ಪ್ರತಿಯೊಬ್ಬರಿಗೂ ಗುರು ವಚನ ಅವಶ್ಯ. ಗುರುವಚನ ಇಲ್ಲದಿದ್ದರೆ ಮನುಷ್ಯನಿಗೆ ಶಾಂತಿ ಎಂಬುದು ಸಿಗುವುದಿಲ್ಲವೆಂದು ಶಿಕ್ಷಕ ಎಂ.ಎಫ್. ಯಲಿಗಾರ ಹೇಳಿದರು. ಅವರು ಈಚೆಗೆ ತಾಲೂಕಿನ ಚಿಕ್ಕನರಗುಂದ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಪತ್ರಿವನಮಠದ ಸಿದ್ಧವೀರ ಶ್ರೀಗಳು ಆರ್ಶೀವಚನ ನೀಡಿದರು. ಶಿವಾನಂದ ಅಜ್ಜನವರು, ಗೊಬ್ಬರಗುಂಪಿ ಸಿದ್ದೇಶ್ವರ ಶ್ರೀಗಳು, ಮಲ್ಲಪ್ಪಜ್ಜನವರು, ಚಂದ್ರಗೌಡ ಪೊಲೀಸ್ ಪಾಟೀಲ, ಎಸ್.ಎಸ್. ಗಾಳಿ, ಮಹಾದೇವಪ್ಪ ಭೂಮಣ್ಣವರ, ಸಿ.ಸಿ. ಕುಲಕರ್ಣಿ, ಐ.ಕೆ. ಮುನವಳ್ಳಿ, ಶಿವಯೋಗಿ ಯರಗಟ್ಟಿ, ದೊಡ್ಡಯ್ಯ ಹಿರೇಮಠ, ಈರಪ್ಪ ದಾಂಡೇಲಿ, ಮುತ್ತು ಯರಗಟ್ಟಿ, ಶಿಕ್ಷಕ ವಿರೇಶ ಹಿರೇಮಠ, ಚಂದ್ರು ಕಾಡದೇವರಮಠ ಮುಂತಾದವರು ಹಾಜರಿದ್ದರು. ಜಿ.ಎಸ್. ಮಣ್ಣೂರಮಠ ಸ್ವಾಗತಿಸಿದರು. ಜಿ.ಟಿ. ಹೂಲಿ ನಿರೂಪಿಸಿದರು. ಚಂದ್ರಗೌಡ ಪಾಟೀಲ್ ವಂದಿಸಿದರು.