ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಾತ್ಮರನ್ನು ಸ್ಮರಿಸಿ: ಚನ್ನಮಲ್ಲ ಶ್ರೀ ಕರೆ

Rashmi Kasaragodu
Updated On : 31 Jan 2013, 11:12 am




ನರಗುಂದ: ಈ ಹಿಂದೆ ಸಮಾಜಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಹೋದ ಮಹಾತ್ಮರನ್ನು ಸ್ಮರಿಸಬೇಕೆಂದು ಕಿಲ್ಲಾ ತೊರಗಲ್ಲಿ ಗಚ್ಚಿನ ಹಿರೇಮಠದ ಚನ್ನಮಲ್ಲ ಶ್ರೀ ಹೇಳಿದರು. ಅವರು ಈಚೆಗೆ ಪಟ್ಟಣದ ಪತ್ರಿವನ ಮಠದಲ್ಲಿ ನಡೆದ ಪುಣ್ಯಾರಾಧನೆ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಬೆಳ್ಳಿರಿ ಸಚ್ಚಿದಾನಂದ ಶ್ರೀಗಳು, ಪತ್ರಿವನದ ಸಿದ್ದವೀರ ಶ್ರೀಗಳು, ಗುಳೇದಗುಡ್ಡದ ಶ್ರೀಗಳು, ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಬಸಯ್ಯ ಶಾಸ್ತ್ರಿಗಳು, ಗುರುನಾಥ ಶಾಸ್ತ್ರಿಗಳು, ಚಿಕ್ಕುಂಬಿ, ನಾಗಲಿಂಗ ಶ್ರೀಗಳು, ಶಾಸಕ ಸಿ.ಸಿ. ಪಾಟೀಲ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕೋಟಿ, ಉಪಾಧ್ಯಕ್ಷ ಉಮೇಶ ಯಮೋಜಿ, ಚಂದ್ರು ದಂಡಿನ, ತಾಪಂ ಸದಸ್ಯ ಮಲ್ಲಪ್ಪ ಮೇಟಿ, ಪ್ರಕಾಶ ಪಟ್ಟಣಶಟ್ಟಿ, ಉಮೇಶ ಯಳ್ಳೂರ, ಅಜ್ಜು ಪಾಟೀಲ, ಅನಿಲ್ ಧರಿಯಣ್ಣವರ, ಸಿಪಿಐ ಪ್ರಶಾಂತ ಸಿದ್ಧನಗೌಡ್ರ, ಮುಂತಾದವರು ಹಾಜರಿದ್ದರು. ಈಶ್ವರಯ್ಯ ಮಠಪತಿ ಸ್ವಾಗತಿಸಿ, ನಿರೂಪಿಸಿದರು.



ಭೈರನಹಟ್ಟಿ: ಇಂದು ವಿಶೇಷ ಶಿಬಿರ
ನರಗುಂದ: ಪಟ್ಟಣದ ಯಡೆಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯದ 2012-13ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ದತ್ತು ಗ್ರಾಮ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಜ. 31ರ ಸಂಜೆ 5 ಗಂಟೆಗೆ ದೊರೆಸ್ವಾಮಿ ವಿರಕ್ತಮಠದ ಆವರಣದಲ್ಲಿ ಜರಗಲಿದೆ. ಸಾನ್ನಿಧ್ಯವನ್ನು ಶಾಂತಲಿಂಗ ಶ್ರೀಗಳು ವಹಿಸುವರು. ಕಾಲೇಜು ಸಂಸ್ಥಾಪಕ ವಿ.ಬಿ. ಪಾಟೀಲ, ಪ್ರಾ. ಇಮಾಮಖಾಸಿಂ, ಎಸ್.ಎನ್. ಪೂಜಾರ, ಎಚ್.ಎಚ್. ಮಾದರ, ಎಂ.ವಿ. ಪಾಟೀಲ, ಎ.ವಿ. ಪಾಟೀಲ, ಹನಮಂತಗೌಡ ಪಾಟೀಲ, ಎಸ್.ಬಿ. ದಂಡಿನ, ಈರಪ್ಪ ಐನಾಪುರ, ಧರ್ಮರಾಜಪ್ಪ ತೆಗ್ಗಿನಮನಿ, ಗ್ರಾಪಂ ಸದಸ್ಯ ವೈ.ಬಿ. ಮೊರಬದ, ಉಪನ್ಯಾಸಕ ಕೆ.ಆರ್. ನದಾಫ, ಎಂ.ಜಿ. ಭೋಗಾರ, ಎಸ್.ಪಿ. ಹುಲಮನಿ, ಸಂತೋಷ ಪಾಟೀಲ್, ಫಲಹಾರಗೌಡ ಪಾಟೀಲ ಭಾಗವಹಿಸುವರೆಂದು ಉಪನ್ಯಾಸಕ ಶಿವಾನಂದ ಜೋಗಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಈಶ್ವರ ಬಡಾವಣೆಯಿಂದ ಮೇಟಿ ವಕೀಲರ ಮನೆವರೆಗೆ, ಎಚ್.ಡಿ. ಕುಲಕರ್ಣಿ ಬಡಾವಣೆ, ಪಿ.ಎನ್.ಟಿ. ಕ್ವಾಟರ್ಸ್, ನಿಸರ್ಗ ಬಡಾವಣೆ, ಅಣ್ಣಿಗೇರಿಯವರ ಮನೆ ಲೈನ್, ಮಸೂತಿ ಲೈನ್, ಕಟ್ಟಿಮನಿಯವರ ಲೈನ್, ಬೂದಿಹಾಳ ಮನೆಲೈನ್ ಈ ಭಾಗಗಳಲ್ಲಿ ಗುರುವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಾವೇಶ ಮುಂದೂಡಿಕೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಫೆ. 3ರಂದು ನಡೆಯಬೇಕಾಗಿದ್ದ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನು ಮುಂದೂಡಲಾಗಿದೆ. ಈ ಸಮಾವೇಶವನ್ನು ಫೆ. 15ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಭೆಗೆ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು, ನಟಿ ರಕ್ಷಿತಾ ಆಗಮಿಸುವರು. ಪಕ್ಷದ ಹಿರಿಯ ಮುಖಂಡ ಸಣ್ಣೀರಪ್ಪ ಹಳ್ಳೆಪ್ಪನವರ, ತಾಪಂ ಮಾಜಿ ಅಧ್ಯಕ್ಷ ಮದನ್‌ಲಾಲ್ ಬಾಫಣಾ. ಶಿವಾನಂದ ದೇಸಾಯಿ, ಶಿವರಾಜಗೌಡ ಪಾಟೀಲ, ಸೋಮಣ್ಣ ಡಾಣಗಲ್, ಪುರಸಭೆ ಸದಸ್ಯ ಚೆನ್ನಪ್ಪ ಕರೆಯತ್ತಿನ ಭಾಗವಹಿಸುವರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement