ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿನಿ ಸಾವು: ಸಿಓಡಿ ತನಿಖೆಗೆ ಆಗ್ರಹ

Rashmi Kasaragodu
Updated On : 31 Jan 2013, 11:12 am





ಕನ್ನಡಪ್ರಭ ವಾರ್ತೆ, ಗದಗ, ಜ. 30
ಬೆಳಗಾವಿ ಜಿಲ್ಲೆಯ ಅಥಣಿಯ ಜೆ.ಎ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪ್ರಿಯಾಂಕ ಖಟವಟೆ ಸಾವಿನ ಕುರಿತು ಸಿಓಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಬುಧವಾರ ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ವತಿಯಿಂದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಯವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಪ್ರಿಯಾಂಕ ಖಟವಟೆ ಸಾವು ಆತ್ಮಹತ್ಯೆಯಲ್ಲ. ದುರುದ್ದೇಶದಿಂದ ಕೊಲೆ ಮಾಡಿರುವ ಕುರಿತು ಅನುಮಾನಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಬೇಕು. ಕಾಲೇಜಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ಈಕೆಯನ್ನು ಚುಡಾಯಿಸಿರುವ ಕುರಿತು ವಿದ್ಯಾರ್ಥಿನಿ ಹಲವಾರು ಬಾರಿ ಕಾಲೇಜ್ ಪ್ರಿನ್ಸಿಪಾಲರ ಗಮನಕ್ಕೆ ತಂದರೂ ಯಾವುದೇ ಕ್ರಮತೆಗೆದುಕೊಂಡಿಲ್ಲ.
ಅಲ್ಲದೇ ಪೊಲೀಸ್ ಠಾಣೆಗೆ ದೂರು ನೀಡದಂತೆ ನೋಡಿಕೊಂಡಿದ್ದಾರೆ. ವಿದ್ಯಾರ್ಥಿನಿ ಸಾವನ್ನಪ್ಪಿದ್ದರಿಂದ ಹಲವಾರು ಅನುಮಾನಗಳು ಉಂಟಾಗಿದ್ದು, ಕೂಡಲೇ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಸಮಾಜದ ಸಂಘಟಿಕರು ಹಾಗೂ ಕಾರ್ಯಕರ್ತರು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಸಿಓಡಿ ತನಿಖೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಸಮಾಜದ ಅಧ್ಯಕ್ಷ ಶ್ರೀಕಾಂತ ಖಟವಟೆ, ಈಶ್ವರಸಾ ಮೇರವಾಡೆ, ಪ್ರಕಾಶ ಬಾಕಳೆ, ಬಿ.ಎಚ್. ಲದ್ವಾ, ಪ್ರಭು ಬುರಬುರೆ, ಕಿಶನ್ ಮೇರವಾಡೆ, ಲೋಕನಾಥ ಕಬಾಡಿ, ಬಲರಾಮ ಅರಸಿದ್ದಿ, ಪ್ರಕಾಶ ಮುಸ್ಕಿನ್, ರವಿ ಶಿದ್ಲಿಂಗ್, ಟಿ.ಎನ್. ಭಾಂಡಗೆ, ಸುಧೀರ ಕಾಟಿಗಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement