ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಂಧೆ ರಾಜಿನಾಮೆಗೆ ಆಗ್ರಹ

Rashmi Kasaragodu
Updated On : 31 Jan 2013, 11:10 am


ನರಗುಂದ: ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆಯವರು ಹಿಂದೂ ಧರ್ಮದ ಬಗ್ಗೆ ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡದೇ ಇದ್ದಲ್ಲಿ ಮತ್ತೊಂದು ಸುತ್ತಿನ ಹೋರಾಟ ಮಾಡಲಾಗುವುದೆಂದು ಬಿಜೆಪಿ ತಾಲೂಕು ಅಧ್ಯಕ್ಷ ಸಿ.ವೈ. ದಂಡಿನ ಹೇಳಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಮಂತ್ರಿ ದೇಶದ ಜನತೆಯಲ್ಲಿ ಕ್ಷಮೆ ಕೋರಬೇಕು. ಶಿಂಧೆಯವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿದ್ದಾರೆ.
ಇಂದು ಬೇಂದ್ರೆ ಸಂಸ್ಮರಣೆ
ಲಕ್ಷ್ಮೇಶ್ವರ:  ರಾಮಗಿರಿಯ ವರಕವಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ವೇದಿಕೆಯ 13ನೇ ವರ್ಷಾಚರಣೆಯ ಅಂಗವಾಗಿ ಬೇಂದ್ರೆಯವರ ಎಂದೂ ಮರೆಯದ ಹಾಡುಗಳ ಸಂಸ್ಮರಣೆ ಕಾರ್ಯಕ್ರಮವು ಜ. 31ರ ಸಂಜೆ 5.30ಕ್ಕೆ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರದ ಶಿಕ್ಷಕಿ ಪ್ರಮಿಳಾ ಸಾಂಗ್ಲೀಕರ್ ನಿವಾಸದಲ್ಲಿ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಪ್ರಮೀಳಾ ಸಾಂಗ್ಲೀಕರ್ ವಹಿಸುವರು. ಡಾ. ಎಂ.ಬಿ. ಪಾಟೀಲ, ನರೇಗಲ್ಲಿನ ಎಸ್.ಎ. ಕಾಲೇಜ್ ಕನ್ನಡ ಪ್ರಾಧ್ಯಾಪಕ ಪ್ರೊ. ಸಿ.ಜಿ. ಹುಡೇದಗಡ್ಡಿ, ಸಾಹಿತಿ ಕೆ.ಎಂ. ಸುಂಕದ ಆಗಮಿಸುವರು. ಹಾಗೂ ಎಸ್.ವಿ. ತಮ್ಮನಗೌಡರ ಬೇಂದ್ರಯವರ ಭಾವಗೀತೆಗಳನ್ನು ಪ್ರಸ್ತುತ ಪಡಿಸುವರು ಎಂದು ವೇದಿಕೆಯ ಕಾರ್ಯದರ್ಶಿ ಆರ್.ಎಸ್. ಯಲಬುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement