ಜಿಲ್ಲಾ ಮಟ್ಟಕ್ಕೆ ಮಂಜುನಾಥ ಖಾನಾಪುರ ಆಯ್ಕೆ
ಗದಗ: ಗ್ರಾಮೀಣ ವಲಯದ ಗದಗ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಸಂಭಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಂಜುನಾಥ ಖಾನಾಪುರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಗುಡ್ಲಾನೂರ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್. ಲೂತಿಮಠ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್. ಚಕ್ರಣ್ಣವರ, ಡಿ.ಎಸ್. ತಳವಾರ, ವೈ.ಕೆ.ಚೌಡಾಪುರ. ಮಲ್ಲನಗೌಡ ಭಂಡಿ, ಪ್ರಧಾನ ಗುರು ಕೆ.ಸಿ. ನಭಾಪುರ ಅಭಿನಂದಿಸಿದೆ.