ಇಂದಿನಿಂದ ಉಚಿತತರಬೇತಿ ಪ್ರಾರಂಭ
ಗದಗ: ಎಸ್.ಟಿ. ಹಿರೇಮಠ ಮೆಮೋರಿಯಲ್ ಟ್ರಸ್ಟ್‌ನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಂತಹ ಕೋರ್ಸಗಳಾದ ಕಂಪ್ಯೂಟರ್ ಬೇಸಿಕ್, ಡಿಟಿಪಿ, ಟ್ಯಾಲಿ, ಹಾರ್ಡವೇರ್ ಮತ್ತು ನೆಟವರ್ಕಿಂಗ್, ಸ್ಪೋಕನ್ ಇಂಗ್ಲಿಷ್, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಡಿಜಿಟಲ್ ಫೋಟೊಗ್ರಾಫಿ ಮತ್ತು ವಿಡಿಯೋಗ್ರಾಪಿ, ಮೊಬೈಲ್ ಫೋನ್ ರಿಪೇರಿ, ಟೇಲರಿಂಗ್, ಡಾಲ್ ಮೇಕಿಂಗ್, ಫ್ಯಾಶನ್ ಡಿಜೈನಿಂಗ್ ಮುಂತಾದ ಉಚಿತ ತರಬೇತಿ ಜು.18ರಿಂದ ಪ್ರಾರಂಭಿಸಲಾಗುವುದು. ತರಬೇತಿ ನಂತರ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿ(ಎನ್‌ಸಿವಿಟಿ)ಯಿಂದ ರಾಷ್ಟ್ರೀಯ ಪ್ರಮಾಣ ಪತ್ರ ನೀಡಲಾಗುವುದು ಹಾಗೂ ತರಬೇತಿಯ ನಂತರ ಉದ್ಯೋಗವನ್ನು ದೊರಕಿಸಿಕೊಡಲಾಗುವುದು. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಜು. 18ರೊಳಗಾಗಿ ಎಸ್.ಟಿ. ಹಿರೇಮಠ ಮೆಮೋರಿಯಲ್ ಟ್ರಸ್ಟ್, ಗಿರಿಜಾ ಶಂಕರ ಹಾಸ್ಟೆಲ್, ಮೊದಲನೇ ಮಹಡಿ, ಜೆ.ಟಿ. ಕಾಲೇಜ್ ಎದುರುಗಡೆ, ಹಾತಲಗೇರಿ ನಾಕಾ, ಗದಗ ಇಲ್ಲಿ ಖುದ್ದಾಗಿ ಬಂದು ತಮ್ಮ ಪ್ರವೇಶ ಪಡೆಯಬೇಕು. ಮಾಹಿತಿಗಾಗಿ 9883728686, 9886603126 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.