ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ತುಂಗಭದ್ರಾ ನದಿ ತೀರದ ಗ್ರಾಮಸ್ಥರಿಗೆ ಸೂಚನೆ

Lingaraj Badiger
Updated On : 19 Jul 2013, 12:13 pm

ಮುಂಡರಗಿ: ಶಿವಮೊಗ್ಗ, ಭದ್ರಾವತಿ ಇತರ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ತುಂಗಭದ್ರಾ ನದಿಗೆ ಹರಿದುಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನದಿ ತೀರದ ಗ್ರಾಮಗಳಾದ ವಿಠಲಾಪುರ, ಬಿದರಹಳ್ಳಿ, ಗುಮ್ಮಗೋಳ, ಹಮ್ಮಿಗಿ, ಸಿಂಗಟಾಲೂರು, ಗಂಗಾಪುರ, ಶೀರನಹಳ್ಳಿ, ಕೊರ್ಲಹಳ್ಳಿ, ಕಕ್ಕೂರು, ಹೆಸರೂರು ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳದಲ್ಲಿ ವಾಸಿಸಬೇಕು. ನದಿ ನೀರು ಹೆಚ್ಚುವರಿಯಾಗಿ ಗ್ರಾಮಗಳಿಗೆ ಹರಿಯುವ ಸಾಧ್ಯತೆ ಇದ್ದು, ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಜಾಗಕ್ಕೆ ತೆರಳಲು ತಹಸೀಲ್ದಾರ್ ಎಸ್.ಆರ್. ಶಿರಕೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಆಕಾಶವಾಣಿಯಲ್ಲಿ ನಾಟಕ ಪ್ರಸಾರ
ಮುಂಡರಗಿ: ತಾಲೂಕಿನ ಬರದೂರ ಗ್ರಾಮದ ಎನ್.ಎನ್. ಗೋಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ರಚಿಸಿದ ಅಲೆಮಾರಿ ಮುದುಕ ಥೇಲಿಸ್ ನಾಟಕವು ಜು. 20ರಂದು ಮಧ್ಯಾಹ್ನ 2.35ಕ್ಕೆ ಧಾರವಾಡ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಳ್ಳಲಿದೆ. ಜು. 20ರಂದು ಶನಿವಾರ ಎಳೆಯರ ಬಳಗ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಆಸಕ್ತರು, ಸಾಹಿತ್ಯಾಭಿಮಾನಿಗಳು ಆಲಿಸಬೇಕೆಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್.ಬಿ. ಮುಳ್ಳೊಳ್ಳಿ ಪ್ರಕಟಣೆಯಲ್ಲಿ      ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement