ರಾಘವೇಂದ್ರ ಮಠಕ್ಕೆ ಕೇಶವನಿಧಿತೀರ್ಥ ಶ್ರೀ ಭೇಟಿ
ಮುಂಡರಗಿ: ಇಲ್ಲಿಯ ಮಂತ್ರಾಲಯ ಶ್ರೀರಾಘವೇಂದ್ರ ಮಠಕ್ಕೆ ಮುಳಬಾಗಿಲು ಶ್ರೀಪಾದ ರಾಜರ ಮಠದ ಪೀಠಾಧಿಪತಿ ಕೇಶವನಿಧಿ ತೀರ್ಥ ಶ್ರೀಪಾದಂಗಳು ಈಚೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಮಹಿಳೆಯರು ಹಾಗೂ ಭಕ್ತರು ಸ್ವಾಗತಿಸಿದರು. ನಂತರ ಶ್ರೀಮಠದ ಭಕ್ತರಿಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಬರದ ನಾಡಿನಲ್ಲಿ ಇಲ್ಲೂರ ವಾಸಪ್ಪನವರ ಮೊಮ್ಮಗ ನಾರಾಯಣಪ್ಪ ಇಲ್ಲೂರ ಅವರು ಭೂದಾನ ಕೊಟ್ಟಿರುವದನ್ನು ಶ್ರೀಗಳು ಶ್ಲಾಘಿಸಿದರು.
ನಾರಾಯಣಪ್ಪ ಇಲ್ಲೂರ, ರಾಮಾಚಾರ ಡಂಬಳ, ಶಾಂತೇಶ ಆಚಾರ್ಯ, ಪ್ರಹ್ಲಾದ ದೇಶಪಾಂಡೆ, ಸತೀಶ ಹುಲಿಗೋಳ, ಅಂದಪ್ಪ ಬೆಲ್ಲದ, ಗುರುರಾಜಾಚಾರ್ಯ ಗೊಗ್ಗಿ, ಎಸ್.ಎಸ್. ಮುಂಡರಗಿ, ಸುಧೀರ ಪದಕಿ, ಶ್ರೀದೇವಿ ಜೋಶಿ, ರಾಘವೇಂದ್ರ ಇನಾಮದಾರ ಸೇರಿದಂತೆ ಇತರರು ಇದ್ದರು. ದಿಲೀಪಕುಮಾರ ಜೋಶಿ ನಿರೂಪಿಸಿದರು.
ಸಿಇಓ ತುರುಮರಿ ವರ್ಗಾವಣೆ
ಗದಗ: 3 ವರ್ಷಗಳಿಂದ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವೀರಣ್ಣ ತುರುಮರಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತೆರವಾಗಿರುವ ಈ ಸ್ಥಾನಕ್ಕೆ ಹಾವೇರಿ ಜಿಪಂ ಸಿಇಓ ಆಗಿದ್ದ ಉಮೇಶ ಕುಸುಗಲ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.