ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

30ರಂದು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆ ಸಮಾವೇಶ

Vishwanath S
Updated On : 21 Jul 2013, 11:19 am

ಗದಗ: ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯಿಂದ ಈಚೆಗೆ ನಗರದ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ಹಾಗೂ ಹಿರಿಯರ ನೇತೃತ್ವದಲ್ಲಿ ಸಭೆ ಜರುಗಿತು. ಜು. 30ರಂದು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಪ್ರಥಮ ಜಿಲ್ಲಾ ಸಮಾವೇಶವನ್ನು ಅರ್ಥಪೂರ್ಣವಾಗಿ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ಕೃಷ್ಣ ಹಡಪದ ಮಾತನಾಡಿ, ಸಮಸ್ತ ಕ್ಷೌರಿಕ ಬಂಧುಗಳೆಲ್ಲರೂ ಒಂದಾಗಿ ಶ್ರಮಿಸುವ ಶುಭಗಳಿಗೆ ನಮ್ಮೆಲ್ಲರ ಮುಂದಿದೆ. ತಾವುಗಳೆಲ್ಲರೂ ಸೇರಿಕೊಂಡು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಮೂಲಕ ಪ್ರಪ್ರಥಮವಾಗಿ ಹಮ್ಮಿಕೊಳ್ಳುತ್ತಿರುವ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡು ಬಲಿಷ್ಠ ಕ್ಷೌರಿಕ ಹಿತರಕ್ಷಣಾ ವೇದಿಕೆ ನಿರ್ಮಾಣ ಕೈಜೋಡಿಸಬೇಕು ಎಂದರು. ಸಿಎಂ ಸಿದ್ದರಾಮಯ್ಯನವರು ತಮ್ಮ ಮೊದಲನೇ ಬಜೆಟ್ನಲ್ಲಿ ಕ್ಷೌರಿಕ ಬಂಧುಗಳ ಅಭಿವೃದ್ಧಿಗಾಗಿ ರು. 1 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಿರುವ ಕ್ರಮವನ್ನು ಸಮಸ್ತ ಕ್ಷೌರಿಕ ಬಂಧುಗಳ ಪರವಾಗಿ ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯಿಂದ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ವೇದಿಕೆಯ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಶ್ರೀನಿವಾಸ ಕೊಟೇಕಲ್ಲ, ವೇದಿಕೆಯ ಗದಗ ತಾಲೂಕು ಸಂಚಾಲಕರಾಗಿ ಸುನೀಲ ರಾಯಚೂರ, ಖಜಾಂಚಿಯಾಗಿ ವಿನಾಯಕ ಕ್ಷೀರಸಾಗರ, ಕಾರ್ಯದರ್ಶಿಯಾಗಿ ರಾಜು ಕ್ಷೀರಸಾಗರ ಆಯ್ಕೆಗೊಂಡರು. ಜಿಲ್ಲಾ ಉಪಾಧ್ಯಕ್ಷ ಪಾಂಡು ಕಾಳೆ, ಗದಗ ತಾಲೂಕು ಅಧ್ಯಕ್ಷ ಹೇಮಂತ ವಡ್ಡೆಪಲ್ಲಿ, ಕೇಂದ್ರ ಪ್ರತಿನಿಧಿ ರವೀಂದ್ರಕುಮಾರ ಹಡಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ ವಲ್ಲೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ ಮಾನೆ, ಗೋವಿಂದರಾಜ ಕರ್ನೂಲ್, ರಾಜು ಮಾನೆ, ಆಂಜನೇಯ ಆದೋನಿ, ರಾಘವೇಂದ್ರ ಬಾಯಲಗುಡ್ಡ, ದೀಪಕ ಮಾನೆ, ಯಲ್ಲಪ್ಪ ರಾಂಪುರ, ಮುರಳಿ ವಲ್ಲೂರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement