ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ಯಾರಿ ಓವರ್ ಪದ್ಧತಿಗಾಗಿ ಸಚಿವ ಎಚ್.ಕೆ. ಪಾಟೀಲ್‌ಗೆ ಮನವಿ

Lingaraj Badiger
Updated On : 22 Jul 2013, 1:48 am

ಗದಗ: ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರಸ್ತುತ ವರ್ಷದಲ್ಲಿ ನಾಲ್ಕು ವಿಷಯಗಳಿಗಿಂತಲೂ ಹೆಚ್ಚು ಉತ್ತೀರ್ಣರಾಗದೇ ಇದ್ದಲ್ಲಿ ಮುಂದಿನ ವರ್ಷಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ.
ಇದರಿಂದ ಹಳ್ಳಿಗಳಿಂದ ಬಂದಿರುವಂತಹ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿತು ಡಿಪ್ಲೋಮಾದಂತಹ ಕಷ್ಟಕರ ವಿದ್ಯಾಭ್ಯಾಸಕ್ಕೆ ಹೊಂದಿಕೊಳ್ಳುವುದು ಕಷ್ಟದ ವಿಷಯ. ಆದ್ದರಿಂದ ಈಗಿರುವ ಕ್ಯಾರಿ ಓವರ್ ಪದ್ಧತಿಯನ್ನು ಮುಂದುವರಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಪದ್ಧತಿಯಿಂದ ಗ್ರಾಮೀಣ ಪ್ರದೇಶಗಳ ಡಿಪ್ಲೋಮಾ ವಿದ್ಯಾರ್ಥಿಗಳ ಜೀವನ ಒಂದು ವರ್ಷ ಹಾಳಾಗುತ್ತದೆ. ಆದ್ದರಿಂದ ಕನಿಷ್ಠ 16 ವಿಷಯಗಳವರೆಗೆ ಕ್ಯಾರಿಓವರ್ ಪದ್ಧತಿಯನ್ನು ಜಾರಿಗೊಳಿಸಿದರೆ ಮೂರು ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ತೋಂಟದಾರ್ಯ ಡಿಪ್ಲೋಮಾ ಕಾಲೇಜು, ರೂರಲ್ ಪಾಲಿಟೆಕ್ನಿಕ್ ಹುಲಕೋಟಿ, ಬೆಟಗೇರಿ ಸರ್ಕಾರಿ ಡಿಪ್ಲೋಮಾ ಕಾಲೇಜು, ಅಂಜುಮನ್ ಪಾಲಿಟೆಕ್ನಿಕ ಗದಗ, ಈ ಸಂಸ್ಥೆಗಳ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರ ನೇತೃತ್ವವನ್ನು ಹಾವೇರಿ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ನ ಮಂಜುನಾಥ ಮುಳಗುಂದ, ಋತ್ವಿಕ ಯು, ಮಹಾಂತೇಶ ಬಿ.ಎಸ್, ಅಜ್ಜು ನಡುವಿನಮನಿ, ಬಸವರಾಜ ಎಸ್, ಮಹೇಶ ಡಿ.ಬಿ, ಕಾಂತೇಶ ಜಿ, ಗೋವಿಂದ ಪೂಜಾರ, ಬಸವರಾಜ ಎಚ್, ರಾಘು ಕೋನಿ, ಹರೀಶ ಕೆ. ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement