ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ
ಗದಗ: ವಿದ್ಯಾರ್ಥಿಗಳು ಕೇವಲ ನೌಕರಿ ಪಡೆಯಲು ವಿದ್ಯಾಭ್ಯಾಸದ ಉದ್ದೇಶ ಹೊಂದಿರದೆ ಉತ್ತಮ ಸಮಾಜ ನಿರ್ಮಿಸಿ, ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ಕೆಲಸಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ ಹೇಳಿದರು. ಈಚೆಗೆ ಅವರು ನಗರದ ಕಳಸಾಪೂರ ರಸ್ತೆಯಲ್ಲಿರುವ ಮೈಲಾರಪ್ಪ ಮೆಣಸಗಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘ ಹಾಗೂ ಪಠ್ಯೇತರ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುಸ್ತಕದ ಜ್ಞಾನದ ಜತೆಗೆ ದೇಶದ ಸಮಸ್ಯೆಗಳನ್ನು ಸ್ಪಂದಿಸುವ ಮನೋಜ್ಞನ ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸವನ್ನು ಶಿಕ್ಷಣ ವ್ಯವಸ್ಥೆ ಮಾಡಬೇಕಾಗಿದೆ. ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಬೇಕು ಎಂದರು. ಎಂಎಂ ಟ್ರಸ್ಟ್ನ ಕಾರ್ಯಾಧ್ಯಕ್ಷ ಜಯದೇವ ಮೆಣಸಗಿ ಮಾತನಾಡಿದರು. ಈ ಸಂದರ್ಭ ಆಡಳಿತಾಧಿಕಾರಿ ಎನ್.ಎಂ. ಮುಲ್ಲಾ, ಕಾರ್ಯದರ್ಶಿ ನಾಗರಾಜ ಮೆಣಸಗಿ, ಪ್ರಾಂಶುಪಾಲ ಎಸ್.ಎ. ಸಂಗನಾಳ, ಸಾಂಸ್ಕೃತಿಕ ಸಂಘದ ಮುಖ್ಯಸ್ಥ ಮೋಹನ ದ್ಯಾಪನಗೌಡ್ರ ಇದ್ದರು. ರೀತುಕಾ ಖೋಡೆ ಸ್ವಾಗತಿಸಿದರು. ಜ್ಯೋತಿ ಗುಜ್ಜರಿ ಪರಿಚಯಿಸಿದರು. ಗೋಪಾಲ ಗಡ್ಡದವರ ನಿರೂಪಿಸಿದರು. ಜ್ಯೋತಿ ಸವಡಿ ವಂದಿಸಿದರು.