ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕನಿಷ್ಠ ವೇತನ ಜಾರಿಗೊಳಿಸದಿದ್ರೆ ಅಡುಗೆ ಕೆಲಸ ಸ್ಥಗಿತ

Mainashree
Updated On : 23 Jul 2013, 11:16 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 22
ಅಕ್ಷರ ದಾಸೋಹ ಯೋಜನೆಯಡಿ ಅಡುಗೆ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರ ಕನಿಷ್ಠ ಕೂಲಿ ರು. 10 ಸಾವಿರ ಜಾರಿ ಮಾಡದಿದ್ದರೆ ಬರುವ ಸೆಪ್ಟಂಬರ್ ತಿಂಗಳಲ್ಲಿ ಅಡುಗೆ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಅನಿರ್ದಿಷ್ಟ ಧರಣಿ ಮಾಡುವುದಾಗಿ ರಾಜ್ಯ ಅಕ್ಷರದಾಸೋಹ ನೌಕರ ಸಂಘದ ಉಪಾಧ್ಯಕ್ಷೆ ಬಿ. ಮಹಾದೇವಮ್ಮ ಎಚ್ಚರಿಸಿದ್ದಾರೆ.
ಶನಿವಾರ ಪಟ್ಟಣದ ಬೇಂದ್ರೆ ಭವನದಲ್ಲಿ ನಡೆದ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಸಮ್ಮೇಳನದಲ್ಲಿ ಮಾತನಾಡಿದರು.
ಬಡ, ನಿರ್ಗತಿಕ, ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಅಕ್ಷರ ದಾಸೋಹ ಯೋಜನೆ ಜಾರಿಗೆ ತಂದಿದ್ದು, ಅದೇ ರೀತಿಯಾಗಿ ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕನಿಷ್ಠ ವೇತನ ನೀಡದೇ ಜೀತದಾಳುಗಳನ್ನಾಗಿ ದುಡಿಸಿಕೊಳ್ಳುತ್ತಿರುವುದು ಖೇದದ ವಿಷಯ ಎಂದರು. ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ವಿಠ್ಠಲ ನಾಯಕ ಮಾತನಾಡಿ, ಅಡುಗೆದಾರರಿಗೆ ಸರ್ಕಾರ ಕನಿಷ್ಟ ಕೂಲಿ ರು. 174 ನೀಡಬೇಕು ಎಂದು ಹೇಳುತ್ತಿದೆ. ಆದರೆ, ಕೇವಲ ರು. 30 ಕೂಲಿ ಹಣ ನೀಡುತ್ತಿದೆ. ಯಾವುದೇ ಸೌಲಭ್ಯಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಅಡುಗೆ ಮಾಡುವವರು ಶೋಷಣೆ ಅನುಭವಿಸುತ್ತಿದ್ದಾರೆ. ಜತೆಗೆ ಬಿಸಿಯೂಟ ಯೋಜನೆ ಖಾಸಗೀಕರಣ ಮಾಡುತ್ತಿರುವುದರಿಂದ ಸಾವಿರಾರು ಮಹಿಳೆಯರು ಕೆಲಸದಿಂದ ವಂಚಿತರಾಗುತ್ತಿದ್ದಾರೆ ಎಂದರು.
ತಾಲೂಕು ಘಟಕಾಧ್ಯಕ್ಷೆ ಪುಷ್ಪಾ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ದೊಡ್ಡಮನಿ, ಅನಸೂಯಾ ಮಡಿವಾಳರ ಇತರರಿದ್ದರು. ತಾಲೂಕು ಸಮಿತಿಯನ್ನು ಆಯ್ಕೆಗೊಳಿಸಿದರು. ಮಮತಾಜ ಮಾಳೇಕೊಪ್ಪ ಸ್ವಾಗತಿಸಿ, ರೇಣುಕಾ ದೊಡ್ಡಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement