ಶಿರುಂಜ: ಕ್ಲಸ್ಟರ್ ಮಟ್ಟದ ಕ್ರೀಡಾಕೂಟ
ಗದಗ: ತಾಲೂಕಿನ ಶಿರುಂಜ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ಯಲಿಶಿರೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಯಶಸ್ವಿಯಾಗಿ ಜರುಗಿತು.
ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಮುದುಕನಗೌಡ ಪಾಟೀಲ ವಹಿಸಿದ್ದರು. ಯಲಿಶಿರೂರ ಗ್ರಾಪಂ ಸದಸ್ಯ ಚಂದ್ರಪ್ಪ ಬಸವಣ್ಣೆಪ್ಪ ಕಪ್ಪತ್ತನವರ ಉದ್ಘಾಟಿಸಿದರು.
ರಮೇಶ ಈಶಪ್ಪ ಮಳ್ಳಣ್ಣವರ, ಮಂಜಪ್ಪ ಸಂದಿಮನಿ, ಈಶಣ್ಣ ಕಪ್ಪತ್ತನವರ, ಕೊಟ್ರಪ್ಪ ಕಪ್ಪತ್ತನವರ, ಶಂಕ್ರಪ್ಪ ಬಸಪ್ಪ ಅರಳಿಕಟ್ಟಿ, ಬಿಸ್ಮಿಲ್ಲಾ ನದಾಫ್, ಮಹ್ಮದ ಸಾಹೇಬ ಅಡವಿಸೋಮಾಪುರ, ಶಂಕ್ರಪ್ಪ ಗುಡ್ಡದ, ಶ್ಯಾಮರಾವ್ ಮಾಡಳ್ಳಿ, ಶರಣಪ್ಪ ಮಳ್ಳಣ್ಣವರ, ಮಾರುತೆಪ್ಪ ಚಿಗರಿ, ಶರಣಪ್ಪ ಕಟಗಿ, ವೈ.ಜಿ.ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಡಿ.ಕೆ ಕಲ್ಲೊಳ್ಳಿ, ಟಿ.ಸಿ. ಕುರಟ್ಟಿ ಮುಂತಾದವರು ಮಾತನಾಡಿದರು. ವ್ಹಾಲಿಬಾಲ್, ಥ್ರೋಬಾಲ್, ಖೊಖೋ, ಕಬಡ್ಡಿ, ರಿಲೆ ಗುಂಪು ಆಟಗಳು, ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ ಕ್ರೀಡೆಗಳು ಜರುಗಿದವು.