ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇಶಿ ಕ್ರೀಡೆ ಪ್ರೋತ್ಸಾಹಿಸಿ: ಗೌಡರ

Mainashree
Updated On : 24 Jul 2013, 12:39 pm

ಮುಂಡರಗಿ: ಇಂದು ಪಾಶ್ಚಾತ್ಯ ಕ್ರೀಡೆಗಳ ಅಬ್ಬರದಲ್ಲಿ ದೇಶಿ ಹಾಗೂ ಜನಪದೀಯ ಕ್ರೀಡೆಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ದೇಶಿ ಕ್ರೀಡೆ ಪ್ರೋತ್ಸಾಹಿಸಬೇಕೆಂದು ವೈ.ಎನ್. ಗೌಡರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.  ಪ್ರತಿವರ್ಷ ಕುಸ್ತಿ ಪಂದ್ಯಾವಳಿ ಏರ್ಪಡಿಸಲು ಬೇಕಾದ ಸಂಪನ್ಮೂಲಗಳನ್ನು ಸಂಘಟಿಕರೇ ಕ್ರೋಡೀಕರಿಸಿಕೊಳ್ಳುತ್ತಿದ್ದಾರೆ.
ಪಟ್ಟಣದಲ್ಲಿ ಎರಡು ಗರಡಿ ಮನೆಗಳಿದ್ದು, ತಾವು ಪುರಸಭೆ ಅಧ್ಯಕ್ಷರಾಗಿದ್ದಾಗ ಅವುಗಳನ್ನು ಪುನಶ್ಚೇತನಗೊಳಿಸಲಾಗಿತ್ತು. ನಂತರ ಮುಂದೆ ಬಂದ ಆಡಳಿ ಮಂಡಳಿಯಾಗಲಿ, ಅಧಿಕಾರಿಗಳಾಗಲಿ ಅವುಗಳತ್ತ ಕಾಳಜಿ ತೋರದೇ ನಿರ್ಲಕ್ಷ್ಯವಹಿಸಿದರು. ಇದೀಗ ನೂತನವಾಗಿ ಆಯ್ಕೆಯಾಗಿರುವ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಹಿರಿಯರ ಮಾರ್ಗದರ್ಶನದಲ್ಲಿ ಎರಡೂ ಗರಡಿ ಮನೆಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದರು. ಪ್ರೊ. ಎ.ವೈ. ನವಲಗುಂದ ಮಾತನಾಡಿ, ಕುಸ್ತಿಗೆ  ಪಾಲಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು. ಯಮನಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ನಾರಾಯಣಪ್ಪ ಇಲ್ಲೂರ, ಧ್ರುವಕುಮಾರ ಹೊಸಮನಿ, ಎ.ಪಿ. ದಂಡೀನ, ಸಹದೇವಪ್ಪ ಭಜಂತ್ರಿ, ವಿರೂಪಾಕ್ಷಪ್ಪ ಅಸುಂಡಿ, ಕೊಟ್ರಗೌಡ ಪಾಟೀಲ, ಬಸಪ್ಪ ವಡ್ಡರ, ಸಂಘಟಿಕ ಬಸವರಾಜ ನವಲಗುಂದ, ಚಂದ್ರಕಾಂತ ಉಳ್ಳಾಗಡ್ಡಿ, ಪಾಲಾಕ್ಷಿ ಗಣದಿಣ್ಣಿ, ಶರಣಪ್ಪ ಬೆಲೇರಿ, ಮಂಜುನಾಥ ಇಟಗಿ, ಶ್ರೀನಿವಾಸ ಕಟ್ಟೀಮನಿ, ಅಂದಾನಗೌಡ ಕುಲಕರ್ಣಿ, ಎ.ಕೆ. ಮುಲ್ಲಾನವರ ಉಪಸ್ಥಿತರಿದ್ದರು. ಕಾಶೀನಾಥ ಶಿರಬಡಗಿ, ಎನ್.ಎನ್. ಕಲಕೇರಿ ನಿರ್ಣಾಯಕರಾಗಿ ಆಗಮಿಸಿದ್ದರು. ಬಸವರಾಜ ನವಲಗುಂದ ಸ್ವಾಗತಿಸಿ, ಮೋಹನ್‌ಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement