ಸುದ್ದಿ ಸಂಕ್ಷೇಪ
ಕಲಕೇರಿಯಲ್ಲಿ ಶಾಸಕ ಯಾವಗಲ್ಗೆ ಸನ್ಮಾನ
ನರಗುಂದ: ತಾಲೂಕಿನ ಕಲಕೇರಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಬಿ.ಆರ್. ಯಾವಗಲ್ಲಗೆ ಈಚೆಗೆ ಗ್ರಾಮದ ವತಿಯಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಹಾದೇವಪ್ಪ ಈಟಿ, ರಾಜು ಕಲಾಲ, ಎಂ.ಎಂ. ಮುಳ್ಳೂರ, ಗಿರಿಯಪ್ಪಗೌಡ ಪಾಟೀಲ, ರಾಚಪ್ಪ ಅಳಗವಾಡಿ, ಮಹದೇವಪ್ಪ ಮಣಕವಾಡ, ಕೃಷ್ಣಪ್ಪ ಚಿಲಕವಾಡ, ಫಕೀರಪ್ಪ ಪರಮೇಶ್ವರ, ಶಂಕ್ರಪ್ಪ ಪೂಜಾರ, ಅಡಿವೆಪ್ಪ ಚುಳಕಿ, ಚಂದ್ರಪ್ಪ ಈಟಿ, ವೆಂಕಪ್ಪ ಚಿಲಕವಾಡ, ಬಸಪ್ಪ ತಳವಾರ, ಹನುಮಂತಪ್ಪ ಕೆಳಗೇರಿ, ವಿರೂಪಾಕ್ಷಪ್ಪ ಪರಮೇಶ್ವರ, ಅರ್ಜುನ ಈಟಿ, ಮಲ್ಲಪ್ಪ ಸವದತ್ತಿ, ಶಿವಗೌಡ ಕಾಲವಾಡ, ಜಂಗ್ಲಿಸಾಬ ನದಾಫ್, ದ್ಯಾಮಣ್ಣ ಮಣಕವಾಡ ಮುಂತಾದವರು ಹಾಜರಿದ್ದರು. ಬಸಪ್ಪ ಪರಮೇಶ್ವರ ನಿರೂಪಿಸಿದರು, ಬಸವರಾಜ ಕೆಳಗೇರಿ ವಂದಿಸಿದರು.
ಬೆಳೆವಿಮೆ ತುಂಬಲು ಕೃಷಿ ಇಲಾಖೆ ರೈತರಿಗೆ ಸೂಚನೆ
ನರಗುಂದ: 2013-14ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಸದುಪಯೋಗವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ಬಿತ್ತನೆ ಮಾಡಿರುವ ಮುಸುಕಿನ ಜೋಳ, ಹತ್ತಿ, ಈರಳ್ಳಿ, ಹೆಸರು, ಸೂರ್ಯಕಾಂತಿ, ಬೆಳೆಯ ಮೇಲೆ ಮಳೆ ಆಧಾರಿತ ಮತ್ತು ನೀರಾವರಿ ಆಧಾರಿತವಾಗಿ ಇರುವ ಬೆಳೆಗಳ ಮೇಲೆ ಬೆಳೆ ವಿಮೆ ತುಂಬಲು ಜುಲೈ 31ರಂದು ಕೊನೆಯ ದಿನವಾಗಿದೆ. ತಾಲೂಕಿನ ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಎನ್. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಣಸಿಕಟ್ಟಿಯಲ್ಲಿ ಶಾಸಕಯಾವಗಲ್ಗೆ ಸನ್ಮಾನ
ನರಗುಂದ: ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಶಾಸಕ ಬಿ.ಆರ್. ಯಾವಗಲ್ಲಗೆ ಹುಣಸಿಕಟ್ಟಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದ ಪರವಾಗಿ ಸನ್ಮಾನಿಸಿದರು. ರಾಜು ಕಲಾಲ, ಎಂ.ಎಸ್. ತಿಮ್ಮನಗೌಡ್ರ, ಮುತ್ತಪ್ಪ ಮುಳ್ಳೂರ, ಎಸ್.ಎಚ್. ಕರಮಡಿ, ನಿಂಗಪ್ಪ ಮುಳ್ಳೂರ, ಆನಂದ ಮಲಸಮುದ್ರ, ಚಂದ್ರ ಹಡಪದ, ಮಹಾದೇವ ಮುಳ್ಳೂರ, ಎಲ್.ಎಚ್. ಕರಮಡಿ, ನಿಂಗಪ್ಪ ಅಂಗಡಿ, ಹನುಮಂತಗೌಡ ಗೋಣೆ, ಫಕೀರಗೌಡ ಫಕೀರಗೌಡ್ರ, ಮುತ್ತಪ್ಪ ಬನಪ್ಪಗೌಡ್ರ ಮುಂತಾದವರು ಹಾಜರಿದ್ದರು.
ತಬಲಾದಲ್ಲಿ ಸಾಧನೆ
ನರಗುಂದ: ಪಟ್ಟಣದ ಭಾರತೀಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ಅನಿರುದ್ದ ಗುಡಿಸಾಗರ ಈಚೆಗೆ ನಡೆದ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳ ಮುಂಬೈನಲ್ಲಿ ನಡೆಸಿದ ಹಿಂದುಸ್ತಾನಿ ಶಾಸ್ತ್ರೀ ತಾಳವಾದ್ಯ ಪರೀಕ್ಷೆಯಲ್ಲಿ ಶೇ.66 ರಷ್ಟು ಅಂಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹಿರಿಯ ಸಂಗೀತಗಾರ ಪಂ. ಶ್ರೀನಿವಾಸ ಇನಾಮದಾರರಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಔಷಧಿ ವ್ಯಾಪಾರಸ್ಥರು ಉತ್ತಮ ಸೇವೆ ನೀಡಬೇಕು: ವಿ.ಆರ್. ಕುಲಕರ್ಣಿ
ಗಜೇಂದ್ರಗಡ: ಜನರ ಆರೋಗ್ಯ ರಕ್ಷಿಸುವ ಮಹತ್ತರ ಜವಾಬ್ದಾರಿ ಹೊತ್ತ ಔಷಧಿ ವ್ಯಾಪಾರಸ್ಥರು ಸ್ಪರ್ಧೆಗಿಂತ ಹೆಚ್ಚು ಗ್ರಾಹಕರ ಆರೋಗ್ಯ ಕಾಪಾಡುವ ಜತೆಗೆ ಗುಣಮಟ್ಟದ ಸೇವೆ ಒದಗಿಸುವುದು ಮುಖ್ಯ ಎಂದು ಗದಗ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ವಿ.ಆರ್. ಕುಲಕರ್ಣಿ ಹೇಳಿದರು.
ಅವರು ಸೋಮವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಔಷಧಿ ವ್ಯಾಪಾರಸ್ಥರ ಸಂಘದಿಂದ ಕೂಲಿ ಕಾರ್ಮಿಕ ಮಾರುತಿ ಕಲಾಲಗೆ ಸೈಕಲ್ ರಿಕ್ಷಾ ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರ ರೂಪಿಸಿರುವ ನೀತಿ, ನಿಯಮ ಜತೆಗೆ ಡ್ರಗ್ಸ್ ದರ ನಿಯಂತ್ರಣ ಕಾಯ್ದೆಯನ್ನು ಪಾಲಿಸಲು ಮುಂದಾಗಬೇಕು. ಎಲ್ಲರೂ ವ್ಯಾಪಾರ ಮಾಡುತ್ತಾರೆ. ಆದರೆ, ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಔಷಧ ವರ್ತಕರ ಸೇವೆ ವಿಭಿನ್ನವಾಗಿದೆ. ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು. ಸ್ಥಳೀಯ ಘಟಕ ಅಧ್ಯಕ್ಷ ಉಮೇಶ ಮೆಣಸಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಒಣಕಿ, ರೋಣ ತಾಲೂಕು ಘಟಕ ಅಧ್ಯಕ್ಷ ವೆಂಕಟೇಶ ಭಾವಿ, ಸಂಗಣ್ಣಾ ಶಿಳ್ಳಿ. ಡಾ. ವಿರೇಶಬಾಬು, ಮಹದೇವಗೌಡ್ರ ಲಿಂಗನಗೌಡ, ವರ್ತಕ ದೇವರೆಡ್ಡಿ ಬೇರಗಿ, ಎಂ.ವಿ. ಪಾಗಿ, ಉಮೇಶ ಮಳಗಿ, ಕೆ.ಕೆ. ಪಾಗಿ, ಅಂಬರೀಶ ಅಂಗಡಿ, ವಿ.ವಿ. ಪಾಗಿ, ರವಿ ಸೂಡಿ, ರಮೇಶ ಮಾರನಬಸರಿ, ಶೌಕತ್ಅಲಿ ಅರಳಿಕಟ್ಟಿ, ಹನುಮಂತ ಕರಿಕಟ್ಟಿ, ಶ್ರೀನಿವಾಸ ಮೆಹರವಾಡೆ, ಎ.ಪಿ.ದೇವಗಿರಿಕರ್, ಜಗದೀಶ ಕನಕೇರಿ, ಗೋವಿಂದ ಮಂತ್ರಿ ಇದ್ದರು.