ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರಿಗೆ ಹವಾಮಾನ ಆಧಾರಿತ ಕೃಷಿ ಸಲಹೆ

Mainashree
Updated On : 25 Jul 2013, 11:11 am

ಗದಗ: ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಗದಗ ಜಿಲ್ಲೆಯಲ್ಲಿ ಮುಂದಿನ 5 ದಿನಗಳಂದು ಕೆಲವು ಕಡೆ ಸಾಧಾರಣ ಪ್ರಮಾಣದವರೆಗೆ ಮಳೆ ಆಗುವ ಸಾಧ್ಯತೆಗಳಿವೆ.
ಹಗಲಿನ ಉಷ್ಣಾಂಶ 28- 29 ಡಿಗ್ರಿ ಸೆ, ರಾತ್ರಿ ಉಷ್ಣಾಂಶ 20-21 ಡಿಗ್ರಿ ಸೆ. ಬೆಳಗಿನ ಆದ್ರತೆ ಶೇ. 88-91, ಮಧ್ಯಾಹ್ನದ ಆದ್ರತೆ ಶೇ. 64- 77 ಇರಲಿದೆ. 2-3 ದಿನಗಳಲ್ಲಿ ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ಮುಂದಿನ 5 ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಈ ಮಳೆಯ ಸದ್ಬಳಕೆ ಮಾಡಿಕೊಂಡು ರೈತರು ಗೋವಿನಜೋಳ, ಶೇಂಗಾ (ಹಬ್ಬು), ಮೆಣಸಿನಕಾಯಿ, ಈರುಳ್ಳಿ (ಉಳ್ಳಾಗಡ್ಡಿ), ದೇಶಿ, ಬಿಟಿ ಹತ್ತಿ ಬಿತ್ತಬೇಕು.
ಬಿತ್ತುವಾಗ ಏಕದಳ ಧಾನ್ಯದ ಬೀಜಗಳಿಗೆ ಅಜೋಸ್ಪಿರಲಮ್ಮ, ಪಿ.ಎಸ್.ಬಿ. ಬೀಜೋಪಚಾರ ಮಾಡಬೇಕು. ಅಥವಾ ಬಿತ್ತುವ ಮುನ್ನ ಎಲ್ಲ ಬೆಳೆಗಳಿಗೆ ಟ್ರೈಕೋಡರ್ಮಾ 4 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಉಪಚರಿಸಿ, ಎಣ್ಣೆ ಕಾಳುಗಳ ಬೆಳೆಗಳಿಗೆ ಕ್ಯಾಪ್ಟಾನ್ ಅಥವಾ ಥೈರಾಮ್ ಅಥವಾ ಕಾರ್ಬೊಕ್ಸಿನ ಪ್ರತಿ ಕೆಜಿ ಬೀಜಕ್ಕೆ 2 ಗ್ರಾಂನಂತೆ ಉಪಚರಿಸಿ ಬಿತ್ತಿದರೆ ರೋಗಗಳನ್ನು ತಡೆಗಟ್ಟಬಹುದು. ಸಸ್ಯ ರಕ್ಷಣೆ ಕ್ರಮಗಳಲ್ಲಿ ಹೆಸರು ಬೆಳೆಯಲ್ಲಿ ಮೂತಿ ಹುಳು, ಕೊಂಬಿನ ಹುಳು ಬಾಧೆ ಕಂಡಿದ್ದು ಹತೋಟಿಗಾಗಿ ಪ್ರತಿ ಲೀ. ನೀರಿಗೆ 0.5 ಮಿ. ಲೀ ಫೆನವಲರೇಟ್ 20 ಇಸಿ ಅಥವಾ 2 ಮಿ.ಲೀ ಕ್ವಿನಾಲ್‌ಫಾಸ 25 ಇಸಿ ಬೆರಸಿ ಸಿಂಪಡಿಸಬೇಕು. ಶೇಂಗಾದಲ್ಲಿ ಸ್ಪೋಡೊಪ್ಪೆರಾ ಕೀಡೆ (ತಂಬಾಕಿನ ಕೀಡೆ) ಕಂಡಿದ್ದು ಹತೋಟಿಗೆ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟೆ ಅಥವಾ 2 ಮಿ.ಲೀ ಕ್ವಿನಾಲ್‌ಫಾಸ್ 25 ಇಸಿ ಬೆರೆಸಿ ಸಿಂಪಡಿಸಬೇಕು.
ದನಕರುಗಳಿಗೆ ಮೇವಿಗಾಗಿ ಜೋಳ, ಮೆಕ್ಕೆಜೋಳ, ಸೌತೆ, ಆಫ್ರಿಕನ್‌ಟಾಲ್, ಸಜ್ಜೆ (ಐಸಿಟಿಪಿ-8203) ಹಾಗೂ (ಐಸಿಎಂ, ವಿ-221) ತಳಿಗಳನ್ನು ಜುಲೈ ಕೊನೆಯ ವಾರದವರೆಗೆ ಮೇವಿಗಾಗಿ ಬಿತ್ತನೆ ಮಾಡಬಹುದು. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಇಳುಕಲಿಗೆ ಅಡ್ಡವಾಗಿರುವ ಸಾಲುಗಳಿಗೆ ಬಿತ್ತನೆ ಮಾಡಬೇಕು. ಇದರಿಂದ ಮಣ್ಣಿನಲ್ಲಿ ಹೆಚ್ಚಿನ ಪ್ರಾಮಾಣದ ತೇವಾಂಶ ಸಂಗ್ರಹವಾಗಿ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ. ಹೊಲದ ಬದುವು ಮತ್ತು ನೀರು ತಡೆ ಒಡ್ಡುಗಳ ರಿಪೇರಿ ಕೆಲಸ ಕೈಗೊಳ್ಳಬೇಕು ಎಂದು ಕೃಷಿ ಸಂಶೋಧನಾ ಕೇಂದ್ರದ ಗದಗನ ವಿಸ್ತರಣಾ ಮುಂದಾಳುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement