ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಫ್ತಾ ವಸೂಲಿ ಬಿಜೆಪಿ ಸಂಸ್ಕೃತಿ: ಗಡ್ಡದೇವರಮಠ

Mainashree
Updated On : 25 Jul 2013, 11:11 am

ಗದಗ: ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕಳಕಪ್ಪ ಬಂಡಿ ಕಾಂಗ್ರೆಸ್ ಹಫ್ತಾ ವಸೂಲಿಗೆ ನಿಂತಿದೆ ಎಂದು ಹೇಳಿರುವುದು ಸತ್ಯಕ್ಕೆ ದೂರದ ಮಾತಾಗಿದ್ದು, ಈ ಹಫ್ತಾ ವಸೂಲಿ ಬಿಜೆಪಿ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ಬುಧವಾರ ನಗರದ ಕಾಟನ್‌ಸೇಲ್ ಸೊಸೈಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜು. 22 ರಂದು ಜಿಲ್ಲಾ ಬಿಜೆಪಿ ಅಧ್ಯಕ್ಷಸ್ಥಾನ ವಹಿಸಿಕೊಂಡ ಹುರುಪಿನಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಕಾಂಗ್ರೆಸ್ ಹಫ್ತಾ ವಸೂಲಿಗೆ ಇಳಿದಿದೆ ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ. ಕಾಂಗ್ರೆಸ್ ಪಕ್ಷವು ತತ್ವ ಸಿದ್ಧಾಂತದ ತಳಹದಿಯ ಮೇಲೆ ನೆಲೆಯೂರಿದ್ದು, ಕಾಂಗ್ರೆಸ್ ಪಕ್ಷದ ಏಳ್ಗೆ ಸಹಿಸದ ಬಿಜೆಪಿಯ ಮುಖಂಡರು ಈ ರೀತಿಯಾಗಿ ಸಾರ್ವಜನಿಕರಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರ್ಕಾರವು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅನುದಾನ ನೀಡದೇ ಬಿಜೆಪಿ ಸರ್ಕಾರದ ಯೋಜನೆಗಳನ್ನು, ಹಾಗೂ ಹೊಸ ತಾಲೂಕುಗಳ ರಚನೆಯನ್ನು ತಿರಸ್ಕರಿಸುತ್ತಿದೆ ಎಂಬ ಹೇಳಿಕೆ ನೀಡಿರುವುದು ಖಂಡನಾರ್ಹ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯ ಯೋಜನೆಗಳನ್ನು ತಿರಸ್ಕರಿಸಿಲ್ಲ. ಈಗಾಗಲೇ ಸಿದ್ದರಾಮಯ್ಯನವರು ಹಂತ ಹಂತವಾಗಿ ಹೊಸ ತಾಲೂಕುಗಳ ರಚನೆ ಮಾಡಲು ಕ್ರಮ ಕೈಗೊಂಡಿದ್ದಾರೆ. ಈಚೆಗೆ ಸಿಎಂ ಮಂಡಿಸಿದ ಬಜೆಟ್‌ನ ಕುರಿತು ಕಳಕಪ್ಪ ಬಂಡಿಯವರಿಗೆ ಸರಿಯಾದ ಮಾಹಿತಿಯಿಲ್ಲದೇ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದರು.
ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಉತ್ತರ ಕರ್ನಾಟಕದ ಗದಗ-ಬೆಟಗೇರಿ ಅವಳಿ ನಗರ ಸೇರಿ 6 ನಗರ ಪ್ರದೇಶಗಳಿಗೆ 24್ಢ7 ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ 123 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಸಮರ್ಪಕ ಕುಡಿಯುವ ನೀರಿಗಾಗಿ ಬೃಹತ್ ಕೆರೆ ನಿರ್ಮಾಣಕ್ಕೆ ಅನುದಾನ, ಕವಿವಿಯ ಪಿಜಿ ಸೆಂಟರ್ ನಿರ್ಮಾಣ, ಗದಗನ ಜಿಲ್ಲಾ ಹೆರಿಗೆ ಆಸ್ಪತ್ರೆಯ ನವೀಕರಣಕ್ಕೆ ರು. 8 ಕೋಟಿ ನೀಡಿದೆ. ಯಾವ ಪಕ್ಷವು ಸಾರ್ವಜನಿಕರಿಂದ ಹಪ್ತಾ ವಸೂಲು ಮಾಡಿದೆ. ಯಾವ ಹಗರಣಗಳನ್ನು ಕೈಗೊಂಡಿವೆ ಎಂಬುದು ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚೆಯಾಗಲಿ ಎಂದರು. ಉಮರಪಾರೂಕ್ ಹುಬ್ಬಳ್ಳಿ, ಅಶೋಕ ಮಂದಾಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement