ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅವ್ಯವಸ್ಥೆ ಆಗರ ಅಟಲ್‌ಜಿ ಜನಸ್ನೇಹಿ ಕೇಂದ್ರ

Mainashree
Updated On : 26 Jul 2013, 11:13 am

ಕನ್ನಡಪ್ರಭ ವಾರ್ತೆ, ನರಗುಂದ, ಜು. 25
ತಾಲೂಕಿನ ಜನತೆ ನಿತ್ಯ ಕೆಲಸ ಕಾರ್ಯಗಳಿಗೆ ಬೇಕಾಗುವ ಪ್ರಮಾಣ ಪತ್ರಗಳನ್ನು ಅಟಲಜಿ ಜನಸ್ನೇಹಿ ಕೇಂದ್ರದಿಂದ ಪಡೆದುಕೊಳ್ಳಬೇಕೆಂದರೆ ಹಗಲು ರಾತ್ರಿ ಎನ್ನದೇ ಕೇಂದ್ರ ಕಾಯುವ ಸ್ಥಿತಿ ಈಗ ತಾಲೂಕಿನ ಸಾರ್ವಜನಿಕರಿಗೆ ಬಂದಿದ್ದು, ಅಧಿಕಾರಿಗಳು ಹಾಗೂ ಕೇಂದ್ರಗಳನ್ನು ನಿರ್ವಹಣೆ ಮಾಡುವ ಸಿಬ್ಬಂದಿಗಳು ನಿರ್ಲಕ್ಷ್ಯದಿಂದಾಗಿ ಮತ್ತಷ್ಟು ಸಮಸ್ಯೆ ಹೆಚ್ಚಳವಾಗಿದೆ.
ಈ ಮೊದಲು ಆದಾಯ, ಜಾತಿ, ರವಾಸಿ, ಮುಂತಾದ ಪ್ರಮಾಣ ಪತ್ರಗಳನ್ನು ಕೊಡಲಾಗುತ್ತಿತ್ತು. ಅದಕ್ಕೆ ನೆಮ್ಮದಿ ಕೇಂದ್ರಗಳೆಂದು ಕರೆಯುತ್ತಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಕಡೆ ಗಳಿಗೆಯಲ್ಲಿ ಈ ನೆಮ್ಮದಿ ಕೇಂದ್ರದ ಹೆಸರು ಬದಲಾವಣೆ ಮಾಡಿ ಅಟಲಜಿ ಜನಸ್ನೇಹಿ ಕೇಂದ್ರವೆಂದು ಹೆಸರು ನಾಮಕರಣ ಮಾಡಿದರು. ಕೇವಲ ಹೆಸರೊಂದೇ ಬದಲಿಸಿದರೇ ವಿನಹಃ ಅಲ್ಲಿನ ಸೌಲಭ್ಯಗಳನ್ನಲ್ಲ. ಹಾಗಾಗಿ ಇಂದು ಕೇಂದ್ರಗಳು ಸಾರ್ವಜನಿಕರಿಗೆ ಸಮರ್ಪಕ ಸೇವೆ ಮಾಡದೇ ಇರುವುದರಿಂದ ಶಿಸ್ತಿಗೆ ಹೆಸರಾಗಿದ್ದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಹೆಸರಿನ ಕೇಂದ್ರಗಳ ಮುಂದೆ ಪ್ರತಿಭಟನೆ ಮಾಡುವಂತಾಗಿದೆ.
ಸಿಬ್ಬಂದಿ ವರ್ತನೆ ಸರಿಯಿಲ್ಲ: ಕೇಂದ್ರಗಳಿಗೆ ಅರ್ಜಿಗಳನ್ನು ಹೊತ್ತು ತರುವವರೇ ಹೆಚ್ಚಾಗಿ ಬಡವರು, ಅವರು ಸರ್ಕಾರ ವಿವಿಧ ಸೌಕರ್ಯಗಳಿಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಪಡೆಯಲು ಈ ಕೇಂದ್ರಗಳು ಅತ್ಯಂತ ಅವಶ್ಯಕ. ಆದರೆ, ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಎಷ್ಟೊಂದು ಕೆಟ್ಟದಾಗಿ ವರ್ತಿಸುತ್ತಾರೆ ಎಂದರೆ, ಬೆಳಗ್ಗೆಯಿಂದ ಸಾಯಂಕಾಲದವರೆಗೆ ಸರದಿಯಲ್ಲಿ ಕಾಯ್ದು, ಸರದಿ ಬಂದಾಗ ನಮ್ಮ ದಾಖಲೆಗಳನ್ನು ಪರಿಶೀಲಿಸಿ ಈ ಮಾಹಿತಿ ಸರಿಯಾಗಿಲ್ಲವೆಂದು ನಮ್ಮ ಮುಖಕ್ಕೆ ಎಸೆಯುತ್ತಾರೆ.
ಕೂಲಿ ಮಾಡಿ ಬದುಕುವ ಜನರು ಒಂದು ದಿನದ ಕೂಲಿ ಕಳೆದುಕೊಂಡೇ ಈ ಕೇಂದ್ರಗಳಿಗೆ ಬಂದಿರುತ್ತಾರೆ. ಬಂದ ಕೆಲಸವೂ ಆಗುವುದಿಲ್ಲ. ಅಲ್ಲಿ ದುಡಿಮೆಯೂ ಕೈ ತಪ್ಪಿ ಹೋಗುತ್ತದೆ.
ನಾಮಫಲಕದ ಮಾಹಿತಿ ಇಲ್ಲ: ಅಟಲಜಿ ಜನಸ್ನೇಹಿ ಕೇಂದ್ರದವರು ಯಾವ ಪ್ರಮಾಣ ಪತ್ರಕ್ಕೆ ಯಾವು ರೀತಿ ದಾಖಲೆಗಳು ಬೇಕು ಎನ್ನುವದರ ಬಗ್ಗೆ ನಾಮಫಲಕ ಹಾಕಬೇಕು. ಆದರೆ, ನರಗುಂದ ತಾಲೂಕಿನಲ್ಲಿರುವ ಯಾವ ಕೇಂದ್ರಗಳಲ್ಲಿಯೂ ಇದರ ಬಗ್ಗೆ ಮಾಹಿತಿ ಇಲ್ಲ. ಇನ್ನು ಕೆಲವೆಡೆ ಇಲ್ಲಿ ಈ ಕೇಂದ್ರವಿದೆ ಎನ್ನುವ ಕನಿಷ್ಠ ನಾಮಫಲಕಗಳೂ ಇಲ್ಲ. ಇದರಿಂದ ವಿವಿಧ ಕೆಲಸಗಳಿಗಾಗಿ ಬರುವ ಬಡವರನ್ನು ಕೆಲ ಮಧ್ಯವರ್ತಿಗಳು ನಿತ್ಯವೂ ಸುಲಿಗೆ ಮಾಡುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.

ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement