ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಸುವ ಕಾರ್ಯವಾಗಬೇಕು: ಹುಯಿಲಗೋಳ

Mainashree
Updated On : 26 Jul 2013, 11:14 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 25
ಶಾಸ್ತ್ರೀಯ ಸಂಗೀತಕ್ಕೆ ಅಗಾಧವಾದ ಶಕ್ತಿ ಇದ್ದು, ಅದನ್ನು ಮಕ್ಕಳಿಗೆ ತಿಳಿಸುವ ಮೂಲಕ ಹೊಸ ಹೊಸ ಸಾಧನೆಗೆ ಪ್ರೇರಣೆ ನೀಡಬೇಕು ಎಂದು ಆಕಾಶವಾಣಿ ಹಿರಿಯ ಕಲಾವಿದೆ ಶೋಭಾ ಹುಯಿಲಗೋಳ ಹೇಳಿದರು.
ಸ್ಥಳೀಯ ರಾಮ ದೇವಸ್ಥಾನದಲ್ಲಿ ಶಾರದಾ ಸಂಗೀತ ವಿದ್ಯಾಲಯ ವತಿಯಿಂದ ಗುರು ಪೌರ್ಣಿಮೆ ಪ್ರಯುಕ್ತ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಾಸ್ತ್ರೀಯ ಸಂಗೀತ ಕಲಿಯುವುದು, ಆಲಿಸುವುದರಿಂದ ಮಕ್ಕಳ ಬೌದ್ಧಿಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಅನಕ್ಷರಸ್ಥರೂ ಶಾಸ್ತ್ರೀಯ ಸಂಗೀತ ಕಲಿಯಬಹುದು. ಗುರುವಿನ ಬಗ್ಗೆ ಭಯ, ಭಕ್ತಿ ಹಾಗೂ ಪ್ರೀತಿ ಹೊಂದಿದ ಶಿಷ್ಯನಿಗೆ ಜ್ಞಾನ ಒಲಿಯುವದು ನಿಶ್ಚಿತ. ಸತತ ಪರಿಶ್ರಮ ಪಟ್ಟರೆ ಮಾತ್ರ ಶಾಸ್ತ್ರೀಯ ಸಂಗೀತ ಸಾಧನೆ ಸಾಧ್ಯ ಎಂದರು. ಎಸ್.ಎಮ್. ಭೂಮರಡ್ಡಿ ಶಾಲೆ ಮುಖ್ಯೋಪಾಧ್ಯಾಯ ಮಂಗಳಾ ಕುಲಕರ್ಣಿ ಮಾತನಾಡಿ, ಸಾಧನೆಗೆ ಗುರುಬೇಕು. ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಬೆಳಕಿನ ದಾರಿ ತೋರಿಸುವ ಗುರು ಎರಡನೇ ತಾಯಿ ಇದ್ದಂತೆ. ಭಗವಂತನಿಗೆ ನಮಸ್ಕರಿಸುವ ಮೊದಲು ಗುರುವಿಗೆ ನಮಿಸಬೇಕು. ಅಂದಾಗ ಎಲ್ಲ ವಿದ್ಯೆ ಒಲಿಯುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿ ಮೋಹನ್ ಜೀರೆ, ಶಾಸ್ತ್ರೀಯ ಸಂಗೀತ ಮೂಲಕ ವಿಶ್ವ ವಿಖ್ಯಾತರಾದ ಪಂ. ಭೀಮಸೇನ ಜೋಶಿಯವರು ಹುಟ್ಟಿರುವ ರೋಣ ತಾಲೂಕಿನಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುವಂತಹ ಸಂಗೀತ ರಸದೌತಣ ಉಣಬಡಿಸುವ ಯೋಜನೆ ರೂಪಿಸಲು ಮುಂದಾಗಬೇಕು ಎಂದರು.
ಗದಗ ಕಲಾವಿದ ಎಂ.ವೈ. ಮೂಲಮನಿ, ಗೀತಾ ಸಜ್ಜನರ್, ರಾಧಾ ಜೀರೆ, ಸಂಗಿತ ಶಿಕ್ಷಕಿ ಗಾಯಿತ್ರಿ ಕುಲಕರ್ಣಿ ಉಪಸ್ಥಿತರಿದ್ದರು. ಮಕ್ಕಳ ಸ್ಪರ್ಧಾ ಗೀತೆ ಜನಮನ ಸೆಳೆಯಿತು. ಕೃಷ್ಣಾ ಕುಲಕರ್ಣಿ ಸ್ವಾಗತಿಸಿದರು. ರಾಜೇಶ್ವರಿ ಮಲ್ಲಾಪುರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement