ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸನ್ನಡತೆಯಿಂದ ಸಮಾಜದಲ್ಲಿ ಶಾಂತಿ

Mainashree
Updated On : 26 Jul 2013, 11:16 am

ಕನ್ನಡಪ್ರಭ ವಾರ್ತೆ, ಗದಗ, ಜು. 25
ಧಾರ್ಮಿಕ ಮತ್ತು ವೈಚಾರಿಕ ದೃಷ್ಟಿಕೋನ ಇಟ್ಟುಕೊಂಡು ಸನ್ನಡತೆಯಿಂದ ಜೀವನ ಮಾಡಿದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವ ಮೂಲಕ ಕುಟುಂಬ ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯ ಎಂದು ಎಸ್ಪಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ಮಂಗಳವಾರ ನಗರದ ಪೊಲೀಸ್ ಅತಿಥಿ ಗೃಹದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ಧರ್ಮದ ಗ್ರಂಥಗಳು ಮಾನವ ಏಳ್ಗೆಯನ್ನು ಹಾಗೂ ಸಮಾಜ ಸ್ವಾಸ್ಥ್ಯವನ್ನು ಬೋಧಿಸಿವೆ. ಕುರಾನ್, ವಚನ ಸಾಹಿತ್ಯ ಮತ್ತು ಬೈಬಲ್ ಸೇರಿದಂತೆ ಹಲವು ಧಾರ್ಮಿಕ ಗ್ರಂಥಗಳು ಮಾನವನ ಒಳಿತಿಗಾಗಿ ಹಲವು ತತ್ವ ಸಂದೇಶಗಳನ್ನು ಹೇಳಿವೆ. ಅವುಗಳನ್ನು ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಅನುಷ್ಠಾನಗೊಳಿಸಿದಲ್ಲಿ ನಮ್ಮೆಲ್ಲರ ಬಾಳು ಸುಂದರವಾಗಲು ಸಾಧ್ಯ ಎಂದರು.
ಲಾಲಹುಸೇನ ಕಂದಗಲ್ ಮಾತನಾಡಿ, ಬಹು ಧರ್ಮೀಯರ, ಬಹು ಭಾಷಿಕರ ಸಮಾಜದಲ್ಲಿ ಅನಾವಶ್ಯಕ ಗೊಂದಲ, ತಪ್ಪು ಕಲ್ಪನೆಗಳು ಬೇಡ. ಜಾತಿ, ಧರ್ಮ, ವರ್ಗ ಸಂಘರ್ಷದಿಂದ ಏನನ್ನೂ ಸಾಧಿಸಲಾಗದು. ನಾವಿಂದು ವಿಶ್ವಭ್ರಾತೃತ್ವ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಬೇಕಿದೆ ಎಂದರು.
ಡಿಎಸ್ಪಿ ವಿ.ವಿ. ಕುಂಬಾರ, ಡಿಸಿಆರ್‌ಬಿ ಡಿಎಸ್ಪಿ ಅನಿತಾ ಹದ್ದಣ್ಣವರ ಮುಂತಾದವರು ಇದ್ದರು. ಹಾಫಿಜ್ ಮುಜಿಬುರ್ರೆಹಮಾನ್ ಅವರು ಕುರಾಣ ಪಠಿಸಿದರು.
ಪೊಲೀಸ್ ಅಧಿಕಾರಿಗಳಾದ ನಾಗರಾಜ ಅಂಬಲಿ, ವಿಜಯಕುಮಾರ, ಆರ್.ಎಫ್. ದೇಸಾಯಿ, ಮಹಾಂತೇಶ, ಟಿ. ಫಯೋಜುದ್ದೀನ್, ಜೆ.ಎಚ್. ಉಮಚಗಿ, ಎ.ಎಸ್. ಖವಾಸ, ರಜಾಕ ಡಂಕೇದ, ಸೈಯದ್ ಬಳ್ಳಾರಿ, ಎ.ಎ. ತಡಸ, ಎಸ್.ಎಂ. ಖಾಜಿ, ರಜಾಕ ಯರಗುಡಿ, ಅಬ್ದುಲ್‌ಅಜೀಜ ಖಾಜಿ, ರಾಜಮಹ್ಮದ ಇಳಕಲ್, ಡಾ.  ಎಂ.ಎಸ್. ಮಕಾನದಾರ, ಅ.ದ. ಕಟ್ಟಿಮನಿ ಮುಂತಾದವರು ಇದ್ದರು. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಸಂಚಾಲಕ ಜನಾಬ ಕೆ.ಐ. ಶೇಖ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement