ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 26 Jul 2013, 11:15 am

ಇಂದು ಕಾರ್ಗಿಲ್ ವಿಜಯೋತ್ಸವ ಸ್ಮರಣೆ
ನರಗುಂದ:
  ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ದೊರೆಸ್ವಾಮಿ ಜನಕಲ್ಯಾಣ ಹಾಗೂ ಶಿಕ್ಷಣ ಟ್ರಸ್ಟ್ ದೊರೆಸ್ವಾಮಿ ವಿರಕ್ತಮಠ ಇವುಗಳ ಆಶ್ರಯದಲ್ಲಿ ಜು. 26ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.  ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ, ಹೆಬ್ಬಾಳದ ವೀರೇಶ್ವರ ದೇವರು ಸಾನ್ನಿಧ್ಯವಹಿಸುವರು. ಮಾಜಿ ಸೈನಿಕರ ತಾಲೂಕು ಅಧ್ಯಕ್ಷ ಪಿ.ಬಿ. ವಿರಕ್ತಮಠ, ಮಾಜಿ ಸೈನಿಕ ಜಿ.ಬಿ. ಕಂಟೆನ್ನವರ, ಪಿ.ಟಿ. ಸೂರ್ಯವಂಶಿ, ಎಚ್.ಜಿ. ಅಂಗಡಿ, ಮಹೇಶ್ವರಯ್ಯ ಸುರೇಬಾನ, ಅಶೋಕ ಮೊರಬ, ಉಳಿವೆಪ್ಪ ಬದ್ನಿಕಾಯಿ, ಬಸವರಾಜ ನೇಸರಗಿ, ಗುರಪ್ಪ ಅಂಬಗೇರ,  ರಾಘವೇಂದ್ರ ಗುಜಮಾಗಡಿ, ಅಧ್ಯಕ್ಷ ಚನ್ನು ನಂದಿ, ಸೋಮಲಿಂಗಪ್ಪ ಅಪೋಜಿ, ವೈ.ಆರ್. ಬಸಿಡೋಣೆ ಮತ್ತಿತರರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

ಆರ್‌ಎಸ್‌ಎಸ್‌ನಿಂದ ಗುರು ಪೌರ್ಣಿಮೆ
ಗಜೇಂದ್ರಗಡ: 
ಜಾತಿ ರಹಿತ ಸ್ವಾಸ್ಥ ಸಮಾಜ ನಿರ್ಮಾಣ ಆರ್‌ಎಸ್‌ಎಸ್ ಮುಖ್ಯ ಧ್ಯೇಯ ಎಂದು ಸಂಘ ತಾಲೂಕು ಬೌದ್ಧಿಕ ಪ್ರಮುಖ ಶಿವಕುಮಾರ ದೇಶಣ್ಣವರ ಹೇಳಿದರು.
ಅವರು ಈಚೆಗೆ ಸ್ಥಳೀಯ ಜಗದಂಬಾ ದೇಗುಲದಲ್ಲಿ ರೋಣ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದುಪರ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ ಗುರು ಪೂಜಾ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಸಮಾಜವನ್ನು ಕಾಡುವ ಜಾತಿ ವ್ಯವಸ್ಥೆ ಕಿತ್ತೊಗೆಯಲು ಸಂಘ ಕಂಕಣ ಬದ್ಧವಾಗಿದೆ. ದೇಶಕ್ಕಾಗಿ ಏನನ್ನಾದರೂ ಕೊಡುವ ಅಭ್ಯಾಸ ಮಾಡಿ ಕೊಳ್ಳಬೇಕು ಎಂದರು. ಎಸ್‌ಎಸ್‌ಕೆ ಸಮಾಜ ಮುಖಂಡ ಡಿ.ಸಿ. ಬಾಕಳೆ ಮಾತನಾಡಿದರು. ಸಂಘ ಮುಖಂಡ ತಿಮ್ಮಣ್ಣ ವನ್ನಾಲ, ವಿಶ್ನಾಥಸಾ ಮೇಘರಾಜ, ಕೃಷ್ಣ ಮಾಂಡ್ರೆ, ತಾಲೂಕು ಅಧ್ಯಕ್ಷ ಬಾಬಣಸಾ ರಾಜೋಳ್ಳಿ ಇದ್ದರು. ಗಣ ವೇಷಧಾರಿಗಳು, ವಿಶ್ವ ಹಿಂದು ಪರಿಷತ್, ಬಜ ರಂಗದಳ ಇನ್ನಿತರ ಸಂಘಟನೆ ಕಾರ್ಯಕರ್ತರು ಗುರುಪೂಜಾ ಉತ್ಸವ ನೆರವೇರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement