ನಾಳೆ ಉಚಿತ ತಪಾಸಣಾ ಶಿಬಿರ
ನರಗುಂದ: ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಜು. 28 ರಂದು ಬೆಳಗ್ಗೆ 9 ರಿಂದ 2 ರವರಗೆ ತಾಲೂಕು ಭಾವಸಾರ ಸಂಘ ಹಾಗೂ ಹೈದ್ರಾಬಾದನ ರೋನಬಕ್ಸ್ ಕಾರ್ಸುಲೈಡ್ಸ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ಪ್ರಥಮ ಬಾರಿಗೆ ಎಲುಬಿನ ಸಾಂದ್ರತೆಯ ಉಚಿತ ತಪಾಸಣಾ ಶಿಬಿರ ಹಾಗೂ ಸಕ್ಕರೆ ಖಾಯಿಲೆ, ದಂತ ಚಿಕಿತ್ಸೆ, ಸ್ತ್ರೀ ರೋಗ, ರಕ್ತದ ಒತ್ತಡ, ಹೃದಯ ಹಾಗೂ ಎಲುಬು ಕೀಲುಗಳ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.