ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರ ದಾರಿ ತಪ್ಪಿಸುತ್ತಿರುವ ಯಾವಗಲ್: ಕುಲಕರ್ಣಿ

Mainashree
Updated On : 27 Jul 2013, 11:30 am

ನರಗುಂದ:  ತಾಲೂಕಿನ ಶಾಸಕ ಬಿ.ಆರ್. ಯಾವಗಲ್ ರೈತ ಸಮುದಾಯವನ್ನು ದಾರಿ ತಪ್ಪಿಸಬೇಕೆಂದು ಮಹಾದಾಯಿ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆರೋಪಿಸಿದರು.  ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲಪ್ರಭಾ ಜಲಾಶಯಕ್ಕೆ ಮಹಾದಾಯಿ ತಿರುವು ಯೋಜನೆಗೆ ನಾವು 20 ವರ್ಷಗಳ ಹಿಂದೆ ಹೋರಾಟ ಮಾಡಿದ್ದೇವೆ. ಈ ತಿರುವಿಗೆ ಹಲವಾರು ಕಾನೂನು ತೊಡಕಗಳು ಬರುತ್ತವೆ. ಆದರೆ, ಈ ತಿರುವು ಯೋಜನೆಗೆ ಗೋವಾ ರಾಜ್ಯದವರು ಪರವಾನಗಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಈ ಮಹಾದಾಯಿ ನದಿಯ ಉಪ ನದಿಗಳು ನಮ್ಮ ರಾಜ್ಯದಲ್ಲಿ ಕೇವಲ 35 ಕಿ.ಮೀ. ಮಾತ್ರ ಹರಿಯುತ್ತವೆ. ಈ ಜಾಗೆಯಲ್ಲಿ ಮಲಪ್ರಭಾ ಜಲಾಶಯಕ್ಕೆ ಬರುವ ರೀತಿ ತಡೆಗೋಡೆ ನಿರ್ಮಿಸುವುದು ಅತಿ ಕಷ್ಟದ ಕೆಲಸವಾಗಿದೆ. ಈಗಿನ ಶಾಸಕರು ಯೋಜನೆ ಬಗ್ಗೆ ರೈತರ ನಿಯೋಗವನ್ನು ತೆಗೆದುಕೊಂಡು ಹೋಗುವ ನಾಟಕ ಮಾಡುತ್ತಿದ್ದಾರೆ. ರೈತರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳದೇ, ಕೆಲವು ತಮ್ಮ ಪಕ್ಷದ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ತಾಲೂಕಿನ ಜನತೆಯ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು. ಬಸನಗೌಡ ಚಿಕ್ಕನಗೌಡ್ರ, ಅಣ್ಣಪ್ಪಗೌಡ ಪಾಟೀಲ, ಚಳಪ್ಪ ನಾಯ್ಕರ, ಅಲ್ಲಿಸಬಾ ನದಾಫ್, ರುದ್ರಪ್ಪ ಗಾಣಿಗೇರ, ಬಸಪ್ಪ ಗುಡದೇರಿ, ಈರಣ್ಣ ಗಡಗಿ, ಗುರುಶಾಂತ ನರಸಾಪುರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement