ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ವಾವಲಂಬಿಯನ್ನಾಗಿಸುವ ಶಿಕ್ಷಣ ಅವಶ್ಯ: ಹಿರೇಮಠ

Mainashree
Updated On : 27 Jul 2013, 11:30 am

ಗದಗ: ಪ್ರಚಲಿತ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸಬೇಕಿದೆ ಎಂದು ನಿವೃತ್ತ ಕೃಷಿ ಪ್ರಾಧ್ಯಾಪಕ ಡಾ. ಕೆ.ಸಿ. ಹಿರೇಮಠ ಹೇಳಿದರು.  
ಅವರು ಗುರುವಾರ ಸ್ಥಳೀಯ ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಳವಂಡಿ, ಜ. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.  ಇಲ್ಲಿ ಕಲಿಯುತ್ತಿರುವ ಪ್ರಶಿಕ್ಷಣಾರ್ಥಿಗಳು ಶ್ರಮವಹಿಸಿ, ಅಭ್ಯಶಿಸುವ ಮೂಲಕ ಮಹಾವಿದ್ಯಾಲಯದ ಹಾಗೂ ಪಾಲಕರ ಶ್ರಮಕ್ಕೆ ಪ್ರತಿಫಲ ನೀಡುವಲ್ಲಿ ಶ್ರಮಿಸಬೇಕು. ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿಯು ಸಿಗುವುದು ಕಷ್ಟ. ಅದಕ್ಕಾಗಿ ಸ್ವಾವಲಂಬಿ ಉದ್ಯೋಗ ಕೈಗೊಳ್ಳಲು ಮುಂದಾಗಬೇಕು. ಪ್ರಚಲಿತ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಸ್ವಾವಲಂಬಿಯನ್ನಾಗಿಸಬೇಕು ಎಂದರು. ಉದ್ಘಾಟನೆ ನೆರವೇರಿಸಿದ ಮಹಾವಿದ್ಯಾಲಯದ ಕಾರ್ಯದರ್ಶಿ ರೇವಣಸಿದ್ಧೇಶ್ವರಸ್ವಾಮಿ ಹಿರೇಮಠ ಓದಿದವರೆಲ್ಲ ನಿಜವಾದ ನಾಗರಿಕರಲ್ಲ. ಸಹಕಾರ ಮನೋಭಾವನೆ, ವಿವೇಚನೆ, ಒಳ್ಳೆಯ ನಡವಳಿಕೆ ಹೊಂದಿದವರು ಮಾತ್ರ ಉತ್ತಮ ನಾಗರಿಕರು ಎಂದರು. ಜ. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಸ್ಥಾನಿಕ ಸಮಿತಿಯ ಚೇರಮನ್ ಬಸಣ್ಣ ಮಲ್ಲಾಡದ, ಶಿಬಿರದ ಕಾರ್ಯದರ್ಶಿ ಹರ್ಷಾ ವಿ. ಮಾತನಾಡಿದರು. ಸಾನ್ನಿಧ್ಯವಹಿಸಿದ್ದ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪಿ.ಕೆ. ಒಡೆಯರ, ಸ್ಥಾನಿಕ ಸಮಿತಿಯ ಸದಸ್ಯ ಮಲ್ಲಿಕಾರ್ಜುನ ಶಿಗ್ಲಿ, ಅಜ್ಜಣ್ಣ ಮುಧೋಳ, ಟಿ.ಸಿ. ಅರಳಲಿಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement