ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆಯಿಂದ ಸ್ಕೌಟ್ಸ್, ಗೈಡ್ಸ್ ಸಮಾವೇಶ

Mainashree
Updated On : 28 Jul 2013, 1:15 am

ಗದಗ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಗದಗ ಜಿಲ್ಲಾ ಸಂಸ್ಥೆಯಿಂದ ಬೆಳಗಾವಿ ವಿಭಾಗ ಮಟ್ಟದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಗಳ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಹಾಗೂ ಸಹ ಆಯುಕ್ತರಗಳ 3 ದಿನಗಳ ಸಮಾವೇಶವನ್ನು ಜು. 29 ರಿಂದ 31 ರವರೆಗೆ ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜರುಗಲಿದೆ ಎಂದು ಗದಗ ಶಹರ ಬಿಇಓ ಐ.ಬಿ. ಬೆನಕೊಪ್ಪ ಹೇಳಿದರು. ಅವರು ಗುರುವಾರ ನಗರದ ಗುರುಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಾವೇಶದಲ್ಲಿ ಒಟ್ಟು 9 ಜಿಲ್ಲೆಗಳ 85 ಸ್ಥಳೀಯ ಅಸೋಸಿಯೇಶನ್‌ದ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸುವರು. ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವರು. 9 ಜಿಲ್ಲೆಗಳಿಂದ ಶಿಕ್ಷಕರು ಭಾಗವಹಿಸುವರು. 3 ದಿನಗಳ ಈ ಸಮಾವೇಶಕ್ಕೆ ಊಟದ ವ್ಯವಸ್ಥೆ, ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಸಮಾವೇಶವು ವ್ಯವಸ್ಥಿತವಾಗಿ ನಡೆಯಲು ವಿವಿಧ ಸಮಿತಿಗಳಾದ ಸಮಾವೇಶದ ಸಂಪೂರ್ಣ ಜವಾಬ್ದಾರಿ ಸಮಿತಿ, ವಸತಿ ಹಾಗೂ ಊಟದ ಸಮಿತಿ, ನೊಂದಣಿ ಸಮಿತಿ, ವೇದಿಕೆ ಹಾಗೂ ಆಮಂತ್ರಣ ಪತ್ರಿಕೆ ಸಮಿತಿ, ಹಣಕಾಸು ಸಮಿತಿ, ಮೇಲ್ವಿಚಾರಣಾ ಸಮಿತಿ, ಪ್ರಚಾರ ಸಮಿತಿ, ಅಡಿಗಲ್ಲು ಸಮಾರಂಭದ ಸಮಿತಿಗಳನ್ನು ರಚಿಸಲಾಗಿದೆ. ಜು. 29ರ ಬೆಳಗ್ಗೆ 10ಕ್ಕೆ ಜರುಗುವ ಸಮಾವೇಶವನ್ನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು ಎಂದರು. ಮುಕುಂದ ಪೊತ್ನೀಸ್, ಸುಮಾ ಗರಗ, ವಿಜಯಲಕ್ಷ್ಮೀ ಅಂಗಡಿ, ನಾಗರತ್ನ ಮುಳಗುಂದ, ಹೇಮಲತಾ ದೇಸಾಯಿ, ಕಲಹಾಳ, ಗೌಡರ ಮುಂತಾದವರು ಇದ್ದರು.
ಪಿಯುಸಿ ಪ್ರಥಮ ವರ್ಷ ದಾಖಲೆ ಅವಧಿ ವಿಸ್ತರಣೆ
ಗದಗ: 2012-13ನೇ ಸಾಲಿನಲ್ಲಿ ಎಲ್ಲ ಸರ್ಕಾರಿ ಅನುದಾನಿತ, ಅನುದಾನರಹಿತ ಪಪೂ ಕಾಲೇಜುಗಳ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ದಿನಾಂಕವನ್ನು ವಿಸ್ತರಿಸಲಾಗಿದೆ. ಮಾರ್ಚ್-2013ರ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದವರ ದಾಖಲಾತಿಗೆ ಜು. 31 ಕೊನೆ ದಿನ. ಜೂನ್-2013ರ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದವರಿಗೆ ದಾಖಲಾತಿ ಕೊನೆ ದಿನ ಜು. 31 ಎಂದು ಪಪೂ ಶಿಕ್ಷಣ, ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement