ಬೆಳೆವಿಮೆ ಹಣ ಪಾವತಿ: ರೈತರಿಗೆ ಸಲಹೆ
ಗದಗ: 2013-14ನೇ ಸಾಲಿಗಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ತಾಲೂಕಿನ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಹೋಬಳಿಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ.
ಅರ್ಹ ರೈತರು ಬೆಳೆವಿಮೆಯಲ್ಲಿ ಭಾಗವಹಿಸಲು ಬೆಳೆಸಾಲ ಪಡೆದ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಜು. 31 ಕೊನೆಯ ದಿನವಾಗಿದ್ದು, ಬೆಳೆಸಾಲ ಪಡೆಯದ ರೈತರು ವಿಮಾ ಹಣವನ್ನು ತಮಗೆ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಪಾವತಿ ಮಾಡಬಹುದು. ರೈತರಿಗೆ ಅನುಕೂಲತೆ ಕಲ್ಪಿಸುವ ಸಲುವಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಗದಗ ಇವರ ಮುಖಾಂತರವು ಪಾವತಿ ಮಾಡಬಹುದಾಗಿದೆ.
ತಾಲೂಕಿನ ರೈತರ ಅನುಕೂಲಕ್ಕಾಗಿ ಈ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳು ಜು. 30 ಹಾಗೂ 31ರಂದು 2 ದಿನ ಮಾತ್ರ ಸಹಾಯಕ ಕೃಷಿ ನಿರ್ದೇಶಕರು, ಶಿರಹಟ್ಟಿ ಇವರ ಕಚೇರಿಯಲ್ಲಿ ವಿಮಾ ಹಣವನ್ನು ಭರ್ತಿ ಮಾಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಿದ್ದು, ಕಾರಣ ರೈತರು ವಿಮಾ ಹಣ ಪಾವತಿಗೋಸ್ಕರ ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ವಿಮಾ ಕಂತಿನ ಹಣವನ್ನು ಪಾವತಿಸಬಹುದಾಗಿದೆ.
ಸಂಬಂಧಿಸಿದ ವಿಮಾ ಬೆಳೆಗೆ ನಿಗದಿಪಡಿಸಿದ ವಿಮಾ ಕಂತಿನ ಮೊತ್ತ, ರೈತರು ತಮ್ಮ ಹೊಲದ ಖಾತೆ ಉತಾರ, ರೈತರು 1 ಭಾವ ಚಿತ್ರ, ತಮ್ಮ ಬ್ಯಾಂಕ್ ಖಾತೆಯ ಪಾಸ್‌ಬುಕ್ ಝೆರಾಕ್ಸ್, ಐ.ಎಫ್.ಎಸ್.ಸಿ. ಕೋಡ್ ಸಹಿತ, ಅರ್ಜಿ ಸಲ್ಲಿಸುವ ರೈತರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ನೀಡಬೇಕು.
ವಿಮಾ ಮೊತ್ತವನ್ನು ಜು. 30 ಹಾಗೂ 31 ರಂದು ಸಹಾಯಕ ಕೃಷಿ ನಿರ್ದೇಶಕರು, ಶಿರಹಟ್ಟಿ ಇವರ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.