ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಪ್ಪಣ್ಣ ಜಯಂತಿ

Lingaraj Badiger
Updated On : 29 Jul 2013, 11:42 am

ಗದಗ:  ಹಡಪದ ಅಪ್ಪಣ್ಣ ಕಾಯಕದಲ್ಲಿಯೇ ದೇವರನ್ನು ಕಂಡವರು ಎಂದು ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಕುರುಬರ ಹೇಳಿದರು.  ಈಚೆಗೆ ಅವರು ತಾಲೂಕಿನ ಅಂತೂರ-ಬೆಂತೂರಿನ ಬೂದೀಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಡಪದ ಅಪ್ಪಣ್ಣವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು. ಎ.ವಿ. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶೇಖರಪ್ಪ ಹಡಪದ ವಹಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಯಲ್ಲಪ್ಪ ಅಂಗಡಿ, ಯಂಕಣ್ಣ ಉಮಚಗಿ, ಅಮೃತಪ್ಪ ಜಿನಗಿ, ಲಲಿತಾ ಬಡಿಗೇರ, ಕಾರ್ಯದರ್ಶಿ ಚನ್ನಬಸಪ್ಪ ಹಡಪದ, ಕಲ್ಲಪ್ಪ ಕುಡಗುಂಟಿ, ಫಕೀರಪ್ಪ ನರೇಗಲ್, ದೇವಪ್ಪ ಹಡಪದ, ಗ್ರಾಪಂ ಸದಸ್ಯ ರೇಣವ್ವ ಹಡಪದ ಮುಂತಾದವರು ಉಪಸ್ಥಿತರಿದ್ದರು. ಬಸವ್ವ ಹಡಪದ ಸ್ವಾಗತಿಸಿದರು. ಈಶ್ವರ ಹಡಪದ ನಿರೂಪಿಸಿದರು. ಬೂದಪ್ಪ ಹಡಪದ ವಂದಿಸಿದರು.
ಇಂದು ಪೂರ್ವಭಾವಿ ಸಭೆ
ಮುಂಡರಗಿ:  ಕನ್ನಡ ಜನಾಭಿವೃದ್ಧಿ ವೇದಿಕೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ಜು. 29ರಂದು ಪಟ್ಟಣದ ಪುರಸಭೆಯ ಗಾಂಧಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಶಿವನಗೌಡ ಗೌಡರ ವಹಿಸುವರು. ಸಭೆಯಲ್ಲಿ 2011-12ರಲ್ಲಿ ಸರ್ಕಾರ ಬರಗಾಲ ತಾಲೂಕು ಎಂದು ಘೋಷಣೆ ಮಾಡಿದ್ದು, ಬೆಳೆ ವಿಮೆ ಇದುವರೆಗೂ ನೀಡಿಲ್ಲ. ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಪೂರ್ಣಗೊಳ್ಳದ ಮನೆಗಳಿಗೆ ರು. 1 ಲಕ್ಷ ಸಹಾಯಧನ ನೀಡುವ ಕುರಿತು, ಹಾಗೂ ಪಡಿತರ ಚೀಟಿ ಗೊಂದಲ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ತಾಲೂಕಿನ ಎಲ್ಲ ಸಂಘಟನೆಗಳು, ತಾಲೂಕಿನ ರೈತರು ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕೆಂದು ವೇದಿಕೆಯ ಅಧ್ಯಕ್ಷ ದೇವಪ್ಪ ಇಟಗಿ ತಿಳಿಸಿದ್ದಾರೆ.
ಕಂಪ್ಯೂಟರ್ ತರಬೇತಿ
ಗದಗ:  ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಅಳ್ಳೊಳ್ಳಿ ಆಸ್ಪತ್ರೆ ಹತ್ತಿರ ಎಸ್.ಆರ್.ಜಿ ಎಂಟರ್‌ಪ್ರೈಜಿಸ್ ಕಂಪ್ಯೂಟರ್ ಎಜ್ಯುಕೇಶನ್ ವತಿಯಿಂದ ಕಂಪ್ಯೂಟರ್ ಶಿಕ್ಷಣದ ವಿವಿಧ ಕೋರ್ಸ್‌ಗಳ ಉಚಿತ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ.  ಎಸ್ಸೆಸ್ಸೆಲ್ಸಿಯಿಂದ ಪದವಿ ಪಡೆದ ಎಲ್ಲ ಅಭ್ಯರ್ಥಿಗಳು ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಎಸ್.ಆರ್.ಜಿ ಎಂಟರ್‌ಪ್ರೈಜಿಸ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಯ ವ್ಯವಸ್ಥಾಪಕರನ್ನು (8884838358, 9535106083) ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement