ದಾನಿಗಳು ನೀಡಿದ ನೋಟ್ ಪುಸ್ತಕ ಸದುಪಯೋಗ ಮಾಡಿಕೊಳ್ಳಿ: ಮಲ್ಲೇಶ
ಗದಗ: ದಾನಿಗಳು ನೀಡಿದ ನೋಟ್ ಪುಸ್ತಕ ಸದುಪಯೋಗ ಮಾಡಿಕೊಳ್ಳುವಂತೆ ಶಾಲಾ ಮಕ್ಕಳಿಗೆ ಪ್ರಧಾನ ಶಿಕ್ಷಕ ಮಲೇಶ ಡಿ.ಎಚ್. ಹೇಳಿದರು.
ಅವರು ಗುರುವಾರ ತಾಲೂಕಿನ ಅಡವಿಸೋಮಾಪುರ ಸಣ್ಣತಾಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗದಗ ನಗರದ ವರ್ತಕ ಎಸ್.ಬಿ. ಸಂಕಣ್ಣವರ ಅವರು ಶಾಲಾ ಮಕ್ಕಳಿಗಾಗಿ ಪ್ರತಿ ವರ್ಷವೂ ಉಚಿತ ನೋಟ್ ಪುಸ್ತಕ ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ಲಮಾಣಿ, ಸದಸ್ಯರಾದ ಗೋಪಣ್ಣ ಲಮಾಣಿ, ಸೋಮಪ್ಪ ರಾಠೋಡ, ಮಹಾಂತೇಶ ಲಮಾಣಿ, ವೆಂಕಟೇಶ ಹೀರಪ್ಪ, ಮಲ್ಲೇಶ ಪವಾರ, ಹೇಮಣ್ಣ ಪವಾರ, ಜಿ.ಎಲ್. ಹೂವಿನಹಳ್ಳಿ, ಪಿ.ಬಿ. ಕಿಲಬನವರ, ಮಾನಪ್ಪ ಲಮಾಣಿ, ಶೇಖಪ್ಪ ಲಮಾಣಿ ಇದ್ದರು. ಎಲ್.ವಿ. ನಂದೆಪ್ಪನವರು ಸ್ವಾಗತಿಸಿ, ವಂದಿಸಿದರು.