ಗ್ರಾಮಾಭಿವೃದ್ಧಿಗೆ ಆದ್ಯತೆ
ಹೊಳೆಆಲೂರ: ಈಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮದ ಮತದಾರರು ನನ್ನ ಮೇಲೆ ಭರವಸೆಯನ್ನಿಟ್ಟು ಮತದಾನ ಮಾಡಿದ್ದು, ಅವರ ಭರವಸೆಗೆ ಚ್ಯುತಿ ಬರದಂತೆ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ಬಿ.ಆರ್. ಯಾವಗಲ್ ಭರವಸೆ ನೀಡಿದರು.
ಅವರು ಭಾನುವಾರ ಸ್ಥಳೀಯ ವಾಣಿಜ್ಯೋದ್ಯಮ ಸಂಸ್ಥೆ ರಜತ ಮಹೋತ್ಸವ ಭವನದಲ್ಲಿ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಶಿವಪಾರ್ವತಿ ಮಾಂಗಲ್ಯ ಮಂದಿರ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಶಿವು ಯಾವಗಲ್ ಮಾತನಾಡಿ, ಹೊಳೆಆಲೂರದಿಂದ ಬದಾಮಿಗೆ ಹೋಗುವ ರಸ್ತೆಯಲ್ಲಿ ಮಲಪ್ರಭಾನದಿ ಸೇತುವೆ ಕಿರಿದಾಗಿದ್ದು ಎತ್ತರಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು, ಕೈಗಾರಿಕೆ ವಸಾಹತು ಸ್ಥಾಪನೆ, ಶಿವಪಾರ್ವತಿ ಮಾಂಗಲ್ಯ ಮಂದಿರಕ್ಕೆ ಶಾಸಕರ ಅನುದಾನ, ಕೊಣ್ಣೂರದಿಂದ ಕುರಹಟ್ಟಿವರೆಗೆ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಮಾಡುವುದು ಕುರಿತು ಮನವಿ ಪತ್ರ ಸಲ್ಲಿಸಿದರು. ಅತಿಥಿಗಳಾಗಿದ್ದ ಪಾಲ್ಗೊಂಡಿದ್ದ ಚನ್ನಪ್ಪ ಬೀರನೂರ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭ ಹೊಳೆಆಲೂರಿನ ಗ್ರಾಪಂನ ನೂತನ ಅಧ್ಯಕ್ಷೆ ಬಸಮ್ಮ ವಸ್ತ್ರದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಯಚ್ಚರೇಶ್ವರ ಮಠದ ಯಚ್ಚರಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ವಿ. ಯಾವಗಲ್ ವಹಿಸಿದ್ದರು. ಅತಿಥಿಗಳಾಗಿ ಸಿ.ಜಿ. ಬೀರನೂರ, ಎಂ.ಆರ್. ಐವಳ್ಳಿ, ಕೆ.ಸಿ. ಪಾಟೀಲ, ಎಚ್.ಕೆ. ಪಟೇಲ, ಮೋತಿಲಾಲ ರಾವಳ, ಎಸ್.ಬಿ. ನಾಗಲಾಪುರ, ಎಸ್.ಜಿ. ತೋಟದ, ಬಸವರಾಜ ಮಾಳವಾಡ, ಡಿ.ಎಸ್. ಶೆಲ್ಲಿಕೇರಿ, ಎಂ.ಬಿ. ಕೋಳೇರಿ, ದಶರಥ ಗಾಣಿಗೇರ, ಎಂ.ಎಸ್. ಗಾಳಿಯವರ, ಮಾರುತಿ ಮಂಡಸೊಪ್ಪಿ ಮತ್ತು ಮಾರುತಿ ಹಮಾಲರ ಸಂಘದ ಪದಾಧಿಕಾರಿಗಳು, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಇದ್ದರು. ಸುನಿತಾ ಕೆಸರಭಾವಿ ಪ್ರಾರ್ಥಿಸಿದರು. ಪಾಂಡುರಂಗ ಪತ್ತಾರ ಸ್ವಾಗತಿಸಿದರು. ಡಾ. ಎ.ಎಸ್.ಭೀಮನಗೌಡರ, ಎಸ್.ಕೆ. ಶೆಲ್ಲಿಕೇರಿ ನಿರೂಪಿಸಿದರು. ಶ್ರೀಶೈಲ ಬದಾಮಿ ವಂದಿಸಿದರು.