ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಸ್ತು ರೂಢಿಸಿಕೊಳ್ಳಲು ಸ್ಕೌಟ್ಸ್, ಗೈಡ್ಸ್ ಅವಶ್ಯ

Lingaraj Badiger
Updated On : 30 Jul 2013, 11:01 am

ಕನ್ನಡಪ್ರಭ ವಾರ್ತೆ, ಗದಗ, ಜು. 29
ಯುವಕರಲ್ಲಿ ಹಾಗೂ ಮಕ್ಕಳಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾಮುಖ್ಯ ಪಡೆದುಕೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ್ ನಾಯಕ ಹೇಳಿದರು.
ಅವರು ಸೋಮವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಹಾಗೂ ಗದಗ ಜಿಲ್ಲಾ ಸಂಸ್ಥೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿ ಹಾಗೂ ಸಹಾಯಕ ಜಿಲ್ಲಾ ಆಯುಕ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಮಯಪಾಲನೆ, ಕರ್ತವ್ಯನಿಷ್ಠೆಯ ಬಗ್ಗೆ ವ್ಯಕ್ತಿತ್ವ ವೃದ್ಧಿಗೊಳಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯಂತ ಅವಶ್ಯವಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಸಿ ಮಕ್ಕಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುಕೂಲವಾಗಬೇಕು. ಸೇವಾ ಮನೋಭಾವನೆ ಬೆಳೆಸುವುದರ ಮೂಲಕ ದೇಶ ಸೇವೆಯ ಕಾಯಕಕ್ಕೆ ಯುವ ಹಾಗೂ ವಿದ್ಯಾರ್ಥಿ ಪಡೆಯನ್ನು ನಿರ್ಮಾಣ ಮಾಡಲು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸಹಕಾರಿಯಾಗಿದೆ ಎಂದರು.
ಸ್ಕೌಟ್ಸ್‌ನ ಜಿಲ್ಲಾ ಆಯುಕ್ತ ಮುಕುಂದ ಪೊತ್ನೀಸ್ ಮಾತನಾಡಿ, ರಾಷ್ಟ್ರ ಪ್ರೇಮದ ಭಾವೈಕ್ಯತೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಕೊಳ್ಳಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಂಘಟನಾ ಆಯುಕ್ತೆ ಜಾನಕಿ ವೇಣುಗೋಪಾಲ, 3 ದಿನಗಳ ಸಮಾವೇಶದ ಪ್ರಾಮುಖ್ಯ ಹಾಗೂ ನಡೆಯುವ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಸ್ಕೌಟ್ಸ್ ಗೈಡ್ಸ್ ಘಟಕಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಬೆಳಗಾವಿ ವಿಭಾಗದ 250ಕ್ಕೂ ಹೆಚ್ಚು ಸ್ಕೌಟರ್ ಮತ್ತು ಗೈಡ್‌ರ್ಸಗಳು ಪಾಲ್ಗೊಂಡಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಬಿ.ವಿ. ರಾಮಲತಾ, ಎಲ್.ಟಿ. ಲೋಕೇಶ, ಜಾನಕಿ ವೇಣುಗೋಪಾಲ, ಸಿ.ಎಸ್. ರಡ್ಡಿ, ಕೆ.ಕೆ. ಲೀಲಾ, ಎಂ.ಎಂ. ಲೊಂಡೆ, ಎ.ಎನ್. ನಾಗರಳ್ಳಿ, ಜಿ. ಸುರೇಶ, ವಿಜಯಲಕ್ಷ್ಮಿ ಅಂಗಡಿ, ರವಿ ಮೂಲಿಮನಿ, ನಾಗರತ್ನಾ ಮುಳಗುಂದ, ಹೇಮಲತಾ ದೇಸಾಯಿ, ಸಾವಿತ್ರಿ ಪುರುಷಪ್ಪನವರ, ಎಂ.ಎಂ. ಕಲಹಾಳ, ಜಿ.ಎಲ್. ಬಾರಾಟಕ್ಕೆ, ಎ.ಎಸ್. ಗುಡ್ಲಾನೂರ, ಕೆ.ವಿ. ಪಾಟೀಲ, ಬಾಲಚಂದ್ರ ಬರಮಗೌಡ್ರ, ಎ.ಎಂ. ಕುಂಟೋಜಿ ಮುಂತಾದವರು ಇದ್ದರು.
ಗದಗ ಶಹರ ಬಿಇಓ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಎಸ್.ಎಸ್. ಗೌಡರ      ನಿರೂಪಿಸಿದರು. ಎಸ್.ಎಸ್. ಗುಜಮಾಗಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement