ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಾಜ ಸೇವೆಯೇ ರೋಟರಿ ಸಂಸ್ಥೆ ಉದ್ದೇಶ: ಶ್ರೀನಿವಾಸ

Lingaraj Badiger
Updated On : 30 Jul 2013, 11:01 am

ಲಕ್ಷ್ಮೇಶ್ವರ: ಸಮಾಜ ಸೇವೆಯೇ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶ ಎಂದು ರೋಟರಿ ಸಂಸ್ಥೆ ಮುಖಂಡ ವಿ.ಶ್ರೀನಿವಾಸ ಹೇಳಿದರು.
ಸೋಮವಾರ, ಪಟ್ಟಣದ ಶಂಕರ ಭಾರತಿಮಠದ ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಅಧಿಕಾರ ಬೋಧನೆ ಮಾಡಿ ಮಾತನಾಡಿದರು. ಸಮಾಜದಿಂದ ನಮಗೇನು ಎಂದು ಕೇಳುವದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವ ಧ್ಯೇಯವನ್ನು ರೋಟರಿ ಸಂಸ್ಥೆ ಹೊಂದಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ರೋಟರಿ ಸಂಸ್ಥೆಯ ಕಾರ್ಯಕ್ಕೆ ಸಹಕಾರ ನೀಡುವದು ಅವಶ್ಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಬಿ.ಕೆ. ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಪ್ರೊಬಸ್ ಕ್ಲಬ್ ಅಧ್ಯಕ್ಷ ಎಸ್.ಎಸ್. ವಸ್ತ್ರದ, ಡಾ. ಪಿ.ಡಿ. ತೋಟದ, ಡಾ. ಎಸ್.ಸಿ. ಮಲ್ಲಾಡದ, ಎಂ.ಎಸ್. ವಾಲಿ, ವಸಂತರಾವ ಜೋಶಿ, ರಾಣಿಬೆನ್ನೂರು ರೋಟರಿ ಸಂಸ್ಥೆಯ ಸುಭಾಸ ಭೂತೆ, ಎಚ್.ಎಂ. ಚಂದ್ರಾಚಾರ್ಯ, ರೋಟರಿ ಜಿಲ್ಲಾಧಿಕಾರಿ ನಾರಾಯಣ ಪವಾರ, ರಾಮರಾವ್ ವೆರ್ಣೇಕರ ಹಾಜರಿದ್ದರು. ನೂತನ ಅಧ್ಯಕ್ಷರಾಗಿ ಬಿ.ಎಸ್. ಬಾಳೇಶ್ವರಮಠ, ಕಾರ್ಯದರ್ಶಿಯಾಗಿ ಡಿ.ಎಂ. ಪೂಜಾರ, ಖಜಾಂಚಿಯಾಗಿ ಎಸ್.ಕೆ. ಪ್ಯಾಟಿ, ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷ ಬಿ.ಕೆ. ಕುಲಕರ್ಣಿ ಸ್ವಾಗತಿಸಿದರು. ಕಾರ್ಯದರ್ಶಿ ಡಿ.ಎಂ. ಪೂಜಾರ ವಂದಿಸಿದರು. ವಿಷ್ಣು ಕುರ್ಡೇಕರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement