ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕುರುಬರಿಗೆ ಆದ್ಯತೆ ನೀಡಿ: ಪೂಜಾರ

Lingaraj Badiger
Updated On : 31 Jul 2013, 11:09 am

ಗದಗ: ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆಯಲ್ಲಿ ಹಾಲುಮತ ಕುರುಬ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ಸಮಾಜದ ಮಹಿಳಾ ನಾಯಕಿ ರೇಣುಕಾ ಪೂಜಾರ ಹೇಳಿದರು.
ಈಚೆಗೆ ಅವರು ಬೆಟಗೇರಿಯ ಮಾರುತಿ ದೇವಸ್ಥಾನದಲ್ಲಿ ನಡೆದ 22ನೇ ಹಾಲುಮತ ಕುರುಬರ ಒಡ್ಡೋಲಗದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕೀಯದಲ್ಲಿ ಸಮಾಜದ ಕೊಡುಗೆ ಅಪಾರವಾಗಿದ್ದು ಅದನ್ನು ಪರಿಗಣಿಸಿ ಮುಂಬರುವ ಚುನಾವಣೆಯಲ್ಲಿ ಅದ್ಯತೆ ನೀಡಬೇಕು. ಸಮಾಜ ಬಾಂಧವರು ಯಾವುದೇ ಪಕ್ಷದಲ್ಲಿ ಕಾರ್ಯನಿರ್ವಹಿಸಿದರೂ ಸಂಘಟನೆ, ಹೋರಾಟ ಎಂಬುದು ಬಂದಾಗ ಎಲ್ಲರೂ ಪಕ್ಷಬೇದ ಮರೆತು ಸಮಾಜಕ್ಕೆ ಸೇವೆ ಸಲ್ಲಿಸಲು ಪಣತೊಡಬೇಕು ಎಂದರು. ಯುವ ಮುಖಂಡ ರವಿ ದಂಡಿನ ಮಾತನಾಡಿ, ಕುರುಬ ಸಮಾಜವು ರಾಜಕೀಯವಾಗಿ ಹಿಂದುಳಿದಿದೆ. ಎಲ್ಲರೂ ಒಂದುಗೂಡಿ ಸಂಘಟನೆ ಬಲಿಷ್ಠಗೊಳಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಸಂಗೊಳ್ಳಿ ರಾಯಣ್ಣನ ಅಮರ ಜ್ಯೋತಿ ಸಂಚರಿಸಲಿದ್ದು, ಸಮಾಜ ಬಾಂಧವರು ಅಮರಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಬೇಕಾಗಿದೆ. ಮಹಿಳೆಯರ ಶಕ್ತಿ ದೊಡ್ಡದು ಯಾವ ಸಮಾಜವು ಮಹಿಳೆಯರಿಗೆ ಅದ್ಯತೆ ನೀಡಿದೆಯೋ ಆ ಸಮಾಜ ಮಾತ್ರ ಅಭಿವೃದ್ಧಿ ಹೊಂದಿದೆ. ಮೀಸಲಾತಿಯ ಲಾಭ ಪಡೆಯಲು ಮಹಿಳೆಯರು ಸಂಘಟನೆಯಲ್ಲಿ ಮುಂದೆ ಬರಬೇಕು. ಸಂಘಟನೆ ಮಾಡಲು ಕಠಿಣ ಪರಿಶ್ರಮ ಅಗತ್ಯವಿದೆ. ಅರ್ಥಿಕವಾಗಿ ಸದೃಢವಾದವರು ಸಮಾಜಕ್ಕೆ ಕೈಲಾದಷ್ಟು ಸೇವೆ ಸಲ್ಲಿಸಬೇಕು ಎಂದರು. ಡಾ. ಎಸ್.ಬಿ. ಗೋವಿಂದಪ್ಪನವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಗೀತಾ ಗುಡೇನಕಟ್ಟಿ, ವೈ.ಎಂ. ನಾಯ್ಕರ, ಬಿ.ಡಿ. ಹರ್ತಿ, ವೈ.ಕೆ. ಚೌಡಾಪುರ, ಪಿ.ಬಿ. ಜಂಬಗಿ, ಲಕ್ಷ್ಮೀದೇವಿ ಜಂಬಗಿ ಮುಂತಾದವರು ಮಾತನಾಡಿದರು.
ಭೀಮಪ್ಪ ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎನ್. ಹರಿಹರ ಸ್ವಾಗತಿಸಿದರು. ರವಿ ಜೋಗಿನ ನಿರೂಪಿಸಿದರು. ಕೃಷ್ಣ ಲಕ್ಕುಂಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement