ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ಕೌಟ್ಸ್, ಗೈಡ್ಸ್ ಅತ್ಯುತ್ತಮ ಸಂಘಟನಾ ಸಂಸ್ಥೆ: ನಾಯಕ

Lingaraj Badiger
Updated On : 31 Jul 2013, 11:02 am

ಗದಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿಶ್ವದ ಎಲ್ಲ ಸಂಸ್ಥೆಯಲ್ಲಿಯೇ ಅತ್ಯುತ್ತಮ ಸಂಘಟನೆ ಸಂಸ್ಥೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ್ ನಾಯಕ ಹೇಳಿದರು.
ಅವರು ಮಂಗಳವಾರ ಸ್ಥಳೀಯ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಬೆಳಗಾವಿ ವಿಭಾಗ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿಗಳ, ಸಹಕಾರ್ಯದರ್ಶಿ, ಖಜಾಂಚಿಗಳ, ಸಹ ಆಯುಕ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಮಾವೇಶವು ಬಹಳಷ್ಟು ಅಚ್ಚುಕಟ್ಟಾಗಿ ಸಮಾರೋಪಾದಿಯಲ್ಲಿ ದಿಟ್ಟ ಕಾರ್ಯಕ್ರಮ ಮಾಡುತ್ತಿರುವುದು ರಾಜ್ಯದಲ್ಲಿಯೇ ಗದಗ ಜಿಲ್ಲೆ ಉತ್ತಮ ಕಾರ್ಯ ಮಾಡಲು ಮುಂದಾಗಿದ್ದು, ನಮ್ಮೆಲ್ಲ ಇಲಾಖೆಗೆ ಕೀರ್ತಿಯ ಕಳಶವನ್ನಿಟ್ಟಂತಿದೆ ಎಂದರು.
ಜಾನಕಿ ವೇಣುಗೋಪಾಲ, ಅತಿಥಿಗಳಾಗಿ ಆಗಮಿಸಿದ್ದ ವಿಭಾಗ ಮಟ್ಟದ ಆಯುಕ್ತ ಎಂ.ಎಂ. ಲೊಂಡೆ, ಅಧ್ಯಕ್ಷತೆ ವಹಿಸಿದ್ದ ಬಾಲಚಂದ್ರ ಬರಮಗೌಡ್ರ ಮಾತನಾಡಿದರು. ಈ ಸಂದರ್ಭ ಎ.ಎಂ. ಕಲ್ಹಾಳ, ಶ್ರೀನಿವಾಸನ್, ಸುಮಾ ಗರಗ, ನಾಗರತ್ನಾ ಮುಳಗುಂದ, ವಿಜಯಲಕ್ಷ್ಮೀ ಅಂಗಡಿ, ಹೇಮಲತಾ ದೇಸಾಯಿ, ಗದಗ ಗ್ರಾಮೀಣ ಬಿ.ಇ.ಓ ಎಸ್.ಎಸ್. ಗುಡ್ಲಾನೂರು, ಮುಂಡರಗಿ ಬಿಇಓ ಎಂ.ಎ. ರಡ್ಡೇರ, ರೋಣ ಬಿಇಓ ಕೆ.ವಿ. ಪಾಟೀಲ, ನರಗುಂದ ಬಿಇಓ ಮಂಗಳಾ ಪಾಟೀಲ, ಶಿರಹಟ್ಟಿ ಬಿಇಓ ಆರ್.ಎಸ್. ಬುರಡಿ, ಎ.ಎಂ. ವಡಗೇರಿ, ಎ.ಎಂ.ನಾಗರಳ್ಳಿ ಇದ್ದರು. ಗದಗ ಬಿಇಓ ಐ.ಬೆ. ಬೆನಕೊಪ್ಪ ಸ್ವಾಗತಿಸಿದರು. ಜಿ.ಎಚ್.ಪೂಜಾರ ಎಸ್.ಎಸ್. ಗೌಡರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement