5ರಿಂದ 3 ಹೊಸ ಧಾರಾವಾಹಿ: ಗರಣಿ
ಕನ್ನಡಪ್ರಭ ವಾರ್ತೆ, ಗದಗ, ಜು. 31
ಆಗಸ್ಟ್ 5ರಿಂದ ಸುವರ್ಣ ವಾಹಿನಿಯಲ್ಲಿ 3 ಹೊಸ ವಿಭಿನ್ನ ರೀತಿಯ ಧಾರಾವಾಹಿ ಪ್ರಾರಂಭವಾಗಲಿವೆ ಎಂದು ನಿರ್ದೇಶಕ, ನಿರ್ಮಾಪಕ ರವಿ ಗರಣಿ ಹೇಳಿದರು. ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಿಯದರ್ಶಿನಿ, ಅರಗಿಣಿ ಹಾಗೂ ಮಿಲನ ಧಾರಾವಾಹಿಗಳು ಸುವರ್ಣ ವಾಹಿನಿಯಲ್ಲಿ ಪ್ರಸಾರ ಪ್ರಾರಂಭವಾಗಲಿದ್ದು. ಉತ್ತರ ಕರ್ನಾಟಕ ಭಾಗದಲ್ಲಿಯೇ ಜನತೆ ಹೆಚ್ಚು ಧಾರಾವಾಹಿಗಳನ್ನು ನೋಡುವ ಹವ್ಯಾಸ ಹೊಂದಿದ್ದು, ಇಲ್ಲಿನ ಜನತೆ ಅಭಿರುಚಿ ಹಾಗೂ ಆಲೋಚನೆಗಳನ್ನು ಗಮನದಲ್ಲಿಟ್ಟುಕೊಂಡೇ ನೂತನ ಧಾರಾವಾಹಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ನಿರ್ಮಾಪಕ ಹಾಗೂ ನಿರ್ದೇಶಕ ಸುಧೀಂದ್ರ ಮಾತನಾಡಿ, ಪ್ರಿಯದರ್ಶಿನಿ ಕೌಟುಂಬಿಕ ಕಥೆಯಾಗಿದೆ. ಅರಗಿಣಿ ಪ್ರೀತಿ-ದ್ವೇಷಗಳ ಹೆಣೆದಿರುವ ಭಾವನಾತ್ಮಕ ಕಥೆಯಾಗಿದೆ. ಮಿಲನ ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ವಿವರಿಸಿದರು. ಪ್ರಿಯದರ್ಶಿನಿ ಧಾರಾವಾಹಿ ನಿರ್ದೇಶಕ ಮಧುಸೂಧನ್ ಸೇರಿದಂತೆ ಧಾರಾವಾಹಿಗಳ ತಂಡದ ಸದಸ್ಯರು, ಕಿರು ತೆರೆಯ ನಟ, ನಟಿಯರು ಹಾಜರಿದ್ದರು.
--