ನಾಳೆ ಎಸ್ಎಫ್ಐನಿಂದ ಬೆಂಗಳೂರು ಚಲೋ
ಗದಗ/ಗಜೇಂದ್ರಗಡ: ಡಿಪ್ಲೋಮಾ ಕ್ಯಾರಿ ಓವರ್ಗೆ ಒತ್ತಾಯಿಸಿ ಎಸ್ಎಫ್ಐ ಸಂಘಟನೆ ಆಗಸ್ಟ್ 2 ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಪೀರು ರಾಠೋಡ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ನೀತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಿದೆ. ರಾಜ್ಯದಲ್ಲಿ ಹೊಸ ಪಠ್ಯಕ್ರಮ ಗುಣಮಟ್ಟ ತಕ್ಕಂತೆ ಬೋಧಿಸುವ ಶಿಕ್ಷಕರ ಕೊರತೆ ಜತೆಗೆ ಅಧ್ಯಯನ ಸಾಮಗ್ರಿಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮುಂದಿನ ಸೆಮಿಸ್ಟರ್ ಮುಂದುವರಿಯಲು ಅರ್ಹತೆ ಬೇಕೆಂಬ ನಿಯಮದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕ್ರಮ ಖಂಡಿಸಿ ಪ್ರತಿಭಟನೆ ನಡೆಯಲಿದೆ. ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಖಾಸಗೀಕರಣ ನೀತಿಯಿಂದ ವಿಪರೀತ ಶುಲ್ಕ ವಸೂಲಿ ಹಾಗೂ ಆಂತರಿಕ ಅಂಕಗಳ ನೆಪವೊಡ್ಡಿ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು ನಿರಂತರವಾಗಿ ನಡೆದಿದೆ. ಇದರಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನಿತರ ಸೌಲಭ್ಯಕ್ಕಾಗಿ ಆಗ್ರಹಿಸಿ ಈ ಹೋರಾಟ ನಡೆಯಲಿದೆ. ನಗರ ಸಮಿತಿ ಉಪಾಧ್ಯಕ್ಷ ಶಿವಾನಂದ ಭೋಸಲೆ, ಜಿಲ್ಲಾ ಮುಖಂಡ ಬಾಲು ರಾಠೋಡ, ಶಿವು ಚವ್ಹಾಣ, ರಾಮೂ ರಾಠೋಡ, ಶಿವಾಜಿ ಗಡ್ಡದ, ಶರಣು ಬಂಡಿ, ಅಭಿ ಭೀಮನೂರ, ಮಂಜುನಾಥ ಮಿಸ್ಕಿನ್, ಪ್ರವೀಣ ಜೆ, ಸಂತೋಷ ಎಸ್. ಲಲಿತಾ ಹಲಗೇರಿ, ಜಾಂಬ್ಲೆಪ್ಪ ರಾಠೋಡ, ಸೂರಜ, ಸಂತೋಷ, ರಾಘು ಮುಧೋಳ, ರೇಖಾ ಅಪ್ಪಣ್ಣವರ, ರಾಚಯ್ಯಾ ಹಿರೇಮಠ, ಪ್ರಿಯಾಂಕಾ ಬೇಡಗಲ್, ಒಪ್ಪತ್ತೇಶ ಬಳ್ಳಾರಿ, ಆದಿತ್ಯಾ, ಮಂಜುನಾಥ ಸೂಡಿ, ಶೃತಿ ಲಕ್ಕಲಕಟ್ಟಿ, ಶಾರುಖಅಲಿ, ತಿರುಪತಿ ರಾಠೋಡ ಹೊರಡಲಿದ್ದಾರೆ. ಬೆಂಗಳೂರಿನಲ್ಲಿ ಆ. 2 ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಅ. 1 ರಂದು ಸಂಜೆ 5 ಗಂಟೆಗೆ ಗದುಗಿನ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಸೇರಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9901821800, 9591140539 8970619050 ಇಲ್ಲಿಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.