ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಗದಗ: ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಇಲ್ಲಿ ಪ್ರಥಮ ಮೂಲ ತರಗತಿ, ಪ್ರಥಮ ಬಿ.ಎಫ್.ಎ ತರಗತಿಗಳ ಪ್ರವೇಶಕ್ಕಾಗಿ 2013-14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಥಮ ಮೂಲ ತರಗತಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರಥಮ ಬಿ.ಎಫ್.ಎ ಗೆ ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣೆ ಪತ್ರಿಕೆಯನ್ನು ರು. 125 ಪಾವತಿಸಿ ಖುದ್ದಾಗಿ ಅಥವಾ 150 ಡಿ.ಡಿಯನ್ನು ಡೀನ್ ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. ಪ್ರಥಮ ಮೂಲ ತರಗತಿಗೆ ಅರ್ಜಿ ಸಲ್ಲಿಸಲು ಜೂನ್ 4 ಆಗಿದ್ದು ಅರ್ಹತಾ ಪರೀಕ್ಷೆಯು ಜೂನ್ 11ರಂದು ಜರುಗಲಿದೆ. ಪರೀಕ್ಷೆಯು ಸಿಟಿಐ ಕಟ್ಟಡ, ಸಯ್ಯಾಜಿರಾವ್ ರಸ್ತೆ, ಮೈಸೂರು-01 ಇಲ್ಲಿ ಜರುಗಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.